ಬೆಂಗಳೂರಲ್ಲಿ ‘ಸ್ಪೈಡರ್’ ಅಂಡ್ ಟೀಮ್

Spread the love


ಮಹೇಶ್ ಬಾಬು ಹಾಗೂ ಎ.ಆರ್ ಮುರುಗದಾಸ್ ಕಾಂಬಿನೇಷನ್ನ ಬಹು ನಿರೀಕ್ಷಿತ ಚಿತ್ರವಾದ ‘ಸ್ಪೈಡರ್’ ಸಿನಿಮಾ ಇದೆ 27 ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲೇ ನಿನ್ನೆಯಷ್ಟೇ ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದ ಚಿತ್ರದ ನಾಯಕ ಪ್ರಿನ್ಸ್ ಮಹೇಶ್ ಬಾಬು, ನಾಯಕಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಸ್ಟಾರ್ ನಿರ್ದೇಶಕ ಎ.ಆರ್.ಮುರುಗದಾಸ್ ಅವರು ಕನ್ನಡ ಮಾಧ್ಯಮದವರೊಂದಿಗೆ ಚಿತ್ರದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು.

ಮೊದಲು ಮಾತನಾಡಿದ ನಾಯಕಿ ರಾಕುಲ್ ಕರ್ನಾಟಕದ ನಂಟನ್ನು ಬಿಚ್ಚಿಟ್ಟರು. ತಮ್ಮ ಬಾಲ್ಯದ ಶಿಕ್ಷಣವನ್ನು ಬೆಂಗಳೂರಲ್ಲಿ ಮಾಡಿದ್ದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಕೂಡ ಕನ್ನಡ ಸಿನಿಮಾದಿಂದಲೇ, ನಾನು 18 ವರ್ಷದವಳಿದ್ದೆ. ಆಗ ತಾನೇ ಮಾಡಲಿಂಗ್ ಮಾಡಲು ಶುರುಮಾಡಿದ್ದೆ, ಆಗ ನನಗೆ ಕನ್ನಡ ಸಿನಿಮಾಗೆ ನಾಯಕಿಯಾಗುವ ಅವಕಾಶ ಬಂತು, ಅದರಿಂದ ನನಗೆ ಲಕ್ಷಾಂತರ ದುಡ್ಡು ಬಂದಿತ್ತು, ಅದೇ ದುಡ್ಡಲ್ಲಿ ಕಾರು ಖರೀದಿಸಿದ್ದೆ, ಹೀಗೆ ಬೆಂಗಳೂರು, ಕನ್ನಡ ಚಿತ್ರರಂಗದ ಕುರಿತು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿರು. ಇನ್ನು ಸಿನಿಮಾ ಕುರಿತಂತೆ ಮಾತನಾಡಿದ ಅವರು ಮಾಹೇಶ್ ಬಾಬು ಹಾಗೂ ನಿರ್ದೇಶಕ ಮುರುಗದಾಸ್ ಜೊತೆ ಕೆಲಸ ಮಾಡಬೇಕೆಬುದು ನನ್ನ ಕನಸಾಗಿತ್ತು. ಅದು ಇಂದು ನೆರವೇರಿದೆ. ಈ ಸಿನಿಮಾ ಕುರಿತು ಭಾರಿ ನಿರೀಕ್ಷೆಗಳಿದ್ದು ದೊಡ್ಡ ಯಶಸ್ಸು ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ನಿರ್ದೇಶಕ ಮುರುಗದಾಸ್ 10 ವರ್ಷಗಳಿಂದ ನಾನು ಮಹೇಶ್ ಬಾಬು ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದೆ ಕೊನೆಗೂ ಸ್ಪೈಡರ್ ಮೂಲಕ ಅದು ನೆರವೇರಿದೆ. ಪೋಕಿರಿ ಚಿತ್ರದ ವೇಳೆ ಅವರನ್ನು ಭೇಟಿಯಾಗಿ ಸಿನಿಮಾ ಮಾಡಲು ಮಾತನಾಡಿದ್ದೆ, ಅದು 10 ವರ್ಷಗಳ ನಂತರ ಈಡೇರಿದೆ ಎಂದರು.. ಮಹೇಶ್ ಬಾಹು ಅವರೇ ತಮಿಳು ಮತ್ತು ತೆಲುಗಿನಲ್ಲಿ ಡಬ್ ಮಾಡಿದ್ದು, ಚಿತ್ರ ಅದ್ಭುತವಾಗಿ ಮೂಡಿಬಂದಿದೆ, ಖಂಡಿತ ನಿಮಗೂ ಇಷ್ಟವಾಗುತ್ತೆ ಎಂದರು.

ಕೊನೆಯದಾಗಿ ಮಾತನಾಡಿದ ಚಿತ್ರದ ನಾಯಕ ಮಹೇಶ್ ಬಾಬು. ಕರ್ನಾಟಕದ ಜನರು ಒಳ್ಳಯೆ ಚಿತ್ರಗಳನ್ನು ಯಾವತ್ತೂ ಕೈಬಿಡದೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅದಕ್ಕೆ ಬಾಹುಬಲಿ 1 ಮತ್ತು 2 ಚಿತ್ರಗಳೇ ಸಾಕ್ಷಿ, ಕನ್ನಡಿಗರು ನನಗೆ ತೋರಿಸಿದ ಪ್ರೀತಿ ಅಭಿಮಾನವನ್ನು ನಾನು ಯಾವತ್ತೂ ಮರೆಯುವುದಿಲ್ಲ. ಪೋಕಿರಿ, ಶ್ರೀಮಂತುಡು ಸೇರಿದಂತೆ ಮುಂತಾದ ಚಿತ್ರಗಳನ್ನು ನೋಡಿ ಬೆಂಬಲಿಸಿದ್ದಾರೆ. ಈ ಚಿತ್ರವನ್ನೂ ನೋಡಿ ಬೆಂಬಲಿಸಿ ಎಂದು ಮನವಿ ಮಾಡಿದರು.

ಇನ್ನು ಚಿತ್ರದ ಕುರಿತಂತ ಹೇಳಬೇಕೆಂದರೆ ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿವೆ. ಸೌತ್ ಸಿನಿರಂಗದ ದೊಡ್ಡ ನಿರ್ದೇಶಕರಲ್ಲಿ ಒಬ್ಬರಾದ ಮುರುಗದಾಸ್ ಅವರ ಸಿನಿಮಾ ಅಂದರೆ ಅಲ್ಲಿ ವಿಶೇಷತೆ ಇರಲೇ ಬೇಕು. ಅದು ಈಗಾಗಲೇ ಟೀಸರ್ ಗಳಲ್ಲಿ ಸಾಬೀತಾಗಿದೆ.
ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು. ದಕ್ಷಿಣ ಚಿತ್ರರಂಗದಲ್ಲಿ ಹೈ ಎಕ್ಸ್ಪೆಕ್ಟೇಶನ್ ಹುಟ್ಟುಹಾಕಿದೆ.

ಮಹೇಶ್‌ಬಾಬು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಗುಪ್ತಚರ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಭಾರತ್, ರಾಕುಲ್ ಪ್ರೀತ್ ಸಿಂಗ್, ಎಸ್. ಜೆ. ಸೂರ್ಯ, ನಾಡಿಯಾ, ಪ್ರಿಯದರ್ಶಿ ಪುಲ್ಲಿಕೊಂಡಾ ಅಭಿನಯಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 27ರಂದು ಬಿಡುಗಡೆಯಾಗುತ್ತಿದೆ.

Facebook Comments

Sri Raghav

Admin