ಬೆಂಗಳೂರಿಗೆ ಬಂದ ಮಾಜಿ ಉಪ ಪ್ರಧಾನಿ ಅಡ್ವಾಣಿ

Advani-01

ಬೆಂಗಳೂರು, ಅ.21- ಬಿಜೆಪಿ ಹಿರಿಯ ನಾಯಕ ಮಾಜಿ ಉಪ ಪ್ರಧಾನಿ ಎಲ್ .ಕೆ.ಅಡ್ವಾಣಿ ಇಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.ಇತ್ತೀಚೆಗೆ ನಿಧನರಾಗಿದ್ದ ಆರ್‍ಎಸ್‍ಎಸ್ ಹಿರಿಯ ಕಾರ್ಯಕರ್ತ ಗೋಪಿನಾಥ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಜನಸಂಘದ ಕಾಲದಿಂದಲೂ ಜೊತೆಗಿದ್ದ ಗೋಪಿನಾಥ್ ಅವರ ಶ್ರೀರಾಮ ಪುರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಲಿದ್ದಾರೆ. ನಂತರ ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಿ ಕೆಲ ಕಾಲ ಮಾತಕತೆ ನಡೆಸಿ ನಗರದ ಖಾಸಗಿ ಹೋಟೆಲ್‍ನಲ್ಲಿ ತಂಗಲಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಗೆ ಎಚ್‍ಎಎಲ್‍ನ ಹೆಲಿಕ್ಯಾಪ್ಟರ್ ಕಾರ್ಖಾನೆಗೆ ಅಡ್ವಾಣಿ ಭೇಟಿ ನೀಡಲಿದ್ದು, ಘಟಕವನ್ನು ವೀಕ್ಷಣೆ ಮಾಡಲಿದ್ದಾರೆ. ಬಳಿಕ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಸಂಜೆ 7ಕ್ಕೆ ವಾಪಸ್ ದಿಲ್ಲಿಗೆ ತೆರಳಲಿದ್ದಾರೆ.

► Follow us on –  Facebook / Twitter  / Google+

Sri Raghav

Admin