ಬೆಂಗಳೂರು ನಗರದ ಬೃಹತ್ ಮಾಲ್‍ಗಳ ಟೋಟಲ್ ಸ್ಟೇಷನ್ ಸರ್ವೆ ಕಾರ್ಯ ಆರಂಭ

Mall

ಬೆಂಗಳೂರು, ಮೇ 19-ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಕಟ್ಟಡಗಳ ತಪ್ಪು ಅಳತೆ ನೀಡಿ ಪಾಲಿಕೆಗೆ ಕೋಟ್ಯಂತರ ರೂ. ನಷ್ಟ ಮಾಡಿರುವ ನಗರದ ಬೃಹತ್ ಮಾಲ್‍ಗಳ ಟೋಟಲ್ ಸ್ಟೇಷನ್ ಸರ್ವೆ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ.  ಬ್ರಿಗೇಡ್ ವಲ್ರ್ಡ್, ಮಂತ್ರಿಮಾಲ್, ಗೋಪಾಲನ್‍ಮಾಲ್,ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ, ಮೀನಾಕ್ಷಿ ಟೆಂಪಲ್, ಆರ್‍ಎಂಝಡ್ ಮಾಲ್‍ಗಳ ಟೋಟಲ್ ಸ್ಟೇಷನ್ ಸರ್ವೆ ಮಾಡಲು ಸಂಬಂಧಪಟ್ಟ ಜಂಟಿ ಆಯುಕ್ತರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.  ನಗರದಲ್ಲಿ ಒಟ್ಟಾರೆ 51 ಮಾಲ್‍ಗಳು ಮತ್ತು 79 ಟೆಕ್‍ಪಾರ್ಕ್‍ಗಳಿವೆ. ಹಂತ ಹಂತವಾಗಿ ಈ ಎಲ್ಲಾ ಮಾಲ್‍ಗಳನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸುತ್ತೇವೆ. ಸದ್ಯಕ್ಕೆ ನಾಲ್ಕು ವಲಯಗಳಿಗೆ ಕಾರ್ಯಾದೇಶ ಕೊಟ್ಟಿದ್ದೇವೆ ಎಂದು ತಿಳಿಸಿದರು.ಬೊಮ್ಮನಹಳ್ಳಿ ವಲಯ: ಬ್ರಿಗೇಡ್ ಮಿಲೇನಿಯಮ್, ಮೀನಾಕ್ಷಿ ಮಾಲ್, ಕಲ್ಯಾಣಿ ಟೆಕ್‍ಪಾರ್ಕ್, ಎಎನ್‍ಆರ್, ಮಧುರ ಫ್ಯಾಷನ್,ಕ್ರೌನ್
ಪಶ್ಚಿಮವಲಯ : ಬ್ರಿಗೇಡ್ ವಲ್ರ್ಡ್ ಟವರ್, ಮಂತ್ರಿಮಾಲ್, ಶೆರಟಾನ್ ಹೊಟೇ ಲ್, ಸುಮಂಗಲಿ ಕಟ್ಟಡ, ಗೋಪಾಲನ್, ಇಟಿಎ ಮಾಲ್, ಮೆಟ್ರೋ
ಯಲಹಂಕ: ಆರ್‍ಎಂಝಡ್ ಮಾಲ್, ಮಾನ್ಯತಾ ಟೆಕ್‍ಪಾರ್ಕ್, ರೇವಾ ವಿವಿ ಕಟ್ಟಡಗಳು

 

ದಕ್ಷಿಣದಲ್ಲಿ : ಗೋಪಾಲನ್ ಮಾಲ್ ಮತ್ತಿತರ ಕಟ್ಟಡಗಳು, ಪೂರ್ವವಲಯದಲ್ಲಿ ಶೀಘ್ರವಾಗಿ ಸರ್ವೆ ಕಾರ್ಯ ಆರಂಭಿಸಲಾಗು ವುದು. ಬಜೆಟ್ ಭಾಷಣದಲ್ಲಿ ತಿಳಿಸಿರುವಂತೆ ನಗರದ ಎಲ್ಲ ಬೃಹತ್ ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸು ತ್ತೇವೆ. ಇದರಿಂದ ಭವಿಷ್ಯದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ತೆರಿಗೆ ವಂಚನೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

 

ನಗದು ರೂಪದಲ್ಲೇ ತೆರಿಗೆ ಪಾವತಿ: ಬ್ಯಾಂಕ್‍ಗಳಲ್ಲಿ ಸರದಿ ಸಾಲಿನಲ್ಲಿ ನಿಂತು ತೆರಿಗೆ ಪಾವತಿಸಲು ಜನರಿಗೆ ತೊಂದರೆಯಾಗಿತ್ತು. ಇದನ್ನು ತಪ್ಪಿಸಲು 10 ಕಡೆ ಬಿಬಿಎಂಪಿ ಕಚೇರಿಗಳಲ್ಲೇ ಕೆನರಾ ಬ್ಯಾಂಕ್‍ನವರು ಕೌಂಟರ್ ಕಲ್ಪಿಸಲು ಮುಂದಾಗಿದ್ದಾರೆ. ಈ ಕೌಂಟರ್‍ನಲ್ಲೇ ಸಾರ್ವಜನಿಕರು 25 ಸಾವಿರ ರೂ.ವರೆಗೂ ತೆರಿಗೆಯನ್ನು ನಗದು ರೂಪದಲ್ಲಿ ಪಾವತಿಸಬಹುದು ಎಂದು ಹೇಳಿದರು.  ಜಯನಗರ, ಆರ್.ಆರ್.ನಗರ, ದಾಸರಹಳ್ಳಿ, ಕಾಕ್ಸ್‍ಟೌನ್, ಬೊಮ್ಮನಹಳ್ಳಿ, ಹೂಡಿ, ಮಾರತ್‍ಹಳ್ಳಿ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಪಾಲಿಕೆ ಕಚೇರಿ ಗಳಲ್ಲಿ ಕೆನರಾಬ್ಯಾಂಕ್ ಕೌಂಟರ್ ತೆರೆಯ ಲಾಗುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ತೆರಿಗೆ ಪಾವತಿಸುವ ಮೂಲಕ ಶೇ.5ರಷ್ಟು ತೆರಿಗೆ ವಿನಾಯಿತಿ ಪಡೆಯಬೇಕೆಂದು ಗುಣಶೇಖರ್ ಮನವಿ ಮಾಡಿದರು.
ನಾಳೆ ಕಾರ್ಯಾಗಾರ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಆನ್‍ಲೈನ್ ತೆರಿಗೆ ಪಾವತಿಯಲ್ಲಿ ಲೋಪದೋಷ ಕಂಡುಬಂದಿದ್ದು, ಕೆಲವು ಲೋಪಗಳನ್ನು ಸರಿಪಡಿಸಲಾಗಿದೆ. ಇನ್ನೂ ಕೆಲವು ಹಾಗೆ ಉಳಿದಿದೆ. ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂಬ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ನಾಳೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಲೋಪದೋಷ ಸರಿಪಡಿಸುವಂತೆ ಸಾಫ್ಟ್‍ವೇರ್ ಅಭಿವೃದ್ಧಿ ಪಡಿಸಿದ ಎನ್‍ಐಸಿ ಸಂಸ್ಥೆಗೂ ನಾವು ಮನವಿ ಮಾಡಿದ್ದೇವೆ. ಒಂದೆರಡು ದಿನದಲ್ಲಿ ಇದು ಸರಿಹೋಗಲಿದೆ ಎಂದು ಹೇಳಿದರು.
ವಿನಾಯಿತಿ ಮುಂದುವರಿಕೆ ಇಲ್ಲ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಮೇ 31ರವರೆಗೆ ಮಾತ್ರ ತೆರಿಗೆ ವಿನಾಯಿತಿ ಇದೆ. ಇದನ್ನು ಯಾವುದೇ ಕಾರಣಕ್ಕೂ ಮುಂದುವರೆಸುವುದಿಲ್ಲ ಎಂದು ಗುಣಶೇಖರ್ ಸ್ಪಷ್ಟಪಡಿಸಿದರು.

675 ಕೋಟಿ ತೆರಿಗೆ: ಕಳೆದ ವರ್ಷ ಈ ದಿನಾಂಕದವರೆಗೂ 659 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಆದರೆ ಈ ವರ್ಷ ಇಲ್ಲಿಯವರೆಗೆ 675 ಕೋಟಿ ತೆರಿಗೆ ಸಂಗ್ರಹ ಮಾಡಿದ್ದೇವೆ ಎಂದು ತಿಳಿಸಿದರು. ಈಗಾಗಲೇ ಕೆಲವರು ಚಲನ್ ಪಡೆದುಕೊಂಡಿರುವುದರಿಂದ ಎರಡು ಮೂರು ದಿನಗಳಲ್ಲಿ 198 ಕೋಟಿ ತೆರಿಗೆ ಸಂಗ್ರಹವಾಗಲಿದೆ. ಒಟ್ಟಾರೆ ಈ ತಿಂಗಳಾಂತ್ಯಕ್ಕೆ ಒಂದು ಸಾವಿರ ಕೋಟಿ ತೆರಿಗೆ ಸಂಗ್ರಹವಾಗುವ ವಿಶ್ವಾಸವಿದೆ ಎಂದು ಗುಣಶೇಖರ್ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin