ಬೆತ್ತಲೆಗೊಳಿಸಿ 20 ಜನರನ್ನು ಭೀಭತ್ಸವಾಗಿ ಹತ್ಯೆ ಮಾಡಿದ ‘ಮೆಂಟಲ್’..!

Pakistan-Mental

ಲಾಹೋರ್, ಏ.2- ಮಾನಸಿಕ ಅಸ್ವಸ್ಥನೊಬ್ಬ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಕನಿಷ್ಠ 20 ಜನರನ್ನು ಬೆತ್ತಲೆಗೊಳಿಸಿ ಕೊಚ್ಚಿ ಕಗ್ಗೊಲೆ ಮಾಡಿರುವ ಭೀಭತ್ಸ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ದರ್ಗಾವೊಂದರಲ್ಲಿ ನಡೆದಿದೆ.   ಲಾಹೋರ್‍ನಿಂದ 200 ಕಿ.ಮೀ.ದೂರದಲ್ಲಿರುವ ಸರ್ಗೋಧಾ ಜಿಲ್ಲೆಯ ಗ್ರಾಮವೊಂದರಲ್ಲಿರುವ ಮಹಮದ್ ಅಲ್ ಗುಜ್ಜರ್ ದರ್ಗಾದಲ್ಲಿ ನಿನ್ನೆ ಮಧ್ಯರಾತ್ರಿ ಈ ಭೀಕರ ಘಟನೆ ಸಂಭವಿಸಿದೆ ಎಂಧು ಉಪ ಪೊಲೀಸ್ ಆಯುಕ್ತ ಲಿಯಾಖತ್ ಅಲಿ ಛಾತಾ ಹೇಳಿದ್ದಾರೆ.

ಮಾನಸಿಕವಾಗಿ ಅಸ್ವಸ್ಥಗೊಂಡ ದರ್ಗಾದ ಅಭಿರಕ್ಷಕ ಅಬ್ದುಲ್ ವಾಹೀದ್ ಈ ನರಮೇಧ ನಡೆಸಿದ್ದು, ಆತನ ಸಹಾಯಕರು ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.   ದರ್ಗಾಗೆ ಭೈೀಟಿ ನೀಡಿದ ಮೂವರು ಮಹಿಳೆಯರೂ ಸೇರಿದಂತೆ 20 ಜನರನ್ನು ಸೆರೆ ಹಿಡಿದು ನಂತರ ಅವರನ್ನು ಬಲವಂತವಾಗಿ ಬೆತ್ತಲೆಗೊಳಿಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ ಮೂವರು ಮಹಿಳೆಯರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ವಾಹೀದ್ ಮತ್ತು ಆತನ ಸಹಾಯಕ ಯೂಸೂಫ್ ಸೇರಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin