ಬೆಳಗಾವಿ : ಕಂದಾಯ ಅಧಿಕಾರಿಗಳ ದಾಳಿ 26 ಮರಳು ಲಾರಿ ವಶ

1

ಬೆಳಗಾವಿ,ಸೆ.30– ಕಂದಾಯ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿ ನಗರದ ಹಣ್ಣಿನ ಮಾರುಕಟ್ಟೆ ಬಳಿ ನಗರ ಪ್ರವೇಶಿಸುತ್ತಿದ್ದ 26 ಮರಳು ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.ಎಸಿ ರಾಜೇಶ್ವರಿ ಜೈನಾಪುರ ಹಾಗೂ ತಹಶೀಲ್ದಾರ ಗಿರೀಶ ಸಾದ್ವಿ ನೇತ್ರತ್ವದ ತಂಡ ಅಕ್ರಮ ಮರಳು ಸಾಗಾಟಗಾರರನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದೆ. ಏರ್ಪೋರ್ಟ್  ರಸ್ತೆ ಮೂಲಕ ನಗರ ಪ್ರವೇಶಿಸುತ್ತಿದ್ದಾಗ ದಾಳಿ ಮಾಡಿದ ಅಧಿಕಾರಿಗಳಿಗೆ ಸೂಕ್ತ ಪಾಸ್ ತೋರಿಸಲು ಚಾಲಕರು ವಿಫಲರಾಗಿದ್ದಾರೆ. ಮುಂದಿನ ಆದೇಶ ನೀಡುವವರೆಗೂ ಪೊಲೀಸ್ ವಶದಲ್ಲಿ ಅಷ್ಟೂ ಲಾರಿಗಳನ್ನು ಇಟ್ಟುಕೊಳ್ಳುವಂತೆ ಉಪವಿಭಾಗಾಧಿಕಾರಿ ರಾಜಶ್ರೀ ಜೈನಾಪುರೆ ಪೊಲೀಸರಿಗೆ ಸೂಚಿಸಿದ್ದಾರೆ. ಅಕ್ರಮ ಮರಳು ಸಾಗಿಸುತ್ತಿದ್ದ 26 ಲಾರಿಗಳ ಮಾಹಿತಿಯ ಲಿಖಿತ ದೂರನ್ನು ಮಾಳಮಾರುತಿ ಠಾಣೆಯಲ್ಲಿ ದಾಖಲಿಸಲಾಗಿದೆ. ಅಕ್ರಮ ಮರಳು ಸಾಗಾಟಗಾರರ ಮೇಲೆ ಸತತ ದಾಳಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಳಿ ಬಿಡದವರು :

ಅಕ್ರಮ ಮರಳು ಸಾಗಾಟದಲ್ಲಿ ದುರ್ಗಾದೇವಿ ಮತ್ತು ಬ್ರಹ್ಮದೇವ ಎಂಬ ತಲೆಬರಹ ಹೊಂದಿದ ಲಾರಿಗಳು ಪದೇಪದೇ ಸಿಕ್ಕಿ ಬೀಳುತ್ತಿದ್ದು ತಮ್ಮ ದಂಧೆ ನಿಲ್ಲಿಸುವ ಗೋಜಿಗೆ ಹೋಗದಿರುವುದು ಗಮನಕ್ಕೆ ಬಂದಿದೆ. ಈ ಹಿಂದೆ ಸಿಸಿಐಬಿ ಸಬï ಇನ್ಸ್‍ಪೆಕ್ಟರ್ ಉದ್ದಪ್ಪ ಕಟ್ಟಿಕಾರ್ ದಾಳಿ ಮಾಡಿ ಇದೇ ಮಾರ್ಗದಲ್ಲಿ ಸುಮಾರು 15 ಕ್ಕೂ ಹೆಚ್ಚು ಅಕ್ರಮ ಮರಳು ಲಾರಿಗಳನ್ನು ವಶಪಡಿಸಿಕೊಂಡಿದ್ದನ್ನು ಸ್ಮರಿಸಬಹುದು. ತಡರಾತ್ರಿ ನಡೆದ ದಾಳಿಯಲ್ಲಿ ಹಿರಿಯ ಅಧಿಕಾರಿಗಳ ಜತೆಗೆ ಮಾಳಮಾರುತಿ ಇನ್ಸ್‍ಪೆಕ್ಟರ್ ಚನ್ನಕೇಶವ ಟಿಂಗಿಕಾರ, ಲೋಕೋಪಯೋಗಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Sri Raghav

Admin