ಬೆಳಗಾವಿ ಪಾಲಿಕೆ ಸೂಪರ್ ಸೀಡ್ ತಪ್ಪಿಸಲು ಎಂಇಎಸ್ ಹೊಸ ವರಸೆ

BELAGAVI

ಬೆಳಗಾವಿ,ನ.25- ಸೂಪರ್ ಸೀಡ್ ಆದ್ರೆ ಮತ್ತೆ ಚುನಾವಣೆಗೆ ಎದುರಾಗುತ್ತದೆ ಎಂಬ ಭಯದಿಂದ ಬೆಳಗಾವಿ ಮಹಾನಗರ ಪಾಲಿಕೆಯ ಹದಿನಾಲ್ಕು ಜನ ಎಂಇಎಸ್ ಸದಸ್ಯರು ಇಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೈೀಟಿಯಾಗಿ ಕನ್ನಡ ಗುಂಪಿಗೆ ಬೆಂಬಲ ಕೊಡುವುದಾಗಿ ಘೋಷಿಸಿ ಸೂಪರ್ ಸೀಡ್‍ನಿಂದ ತಪ್ಪಿಸಿಕೊಳ್ಳಲು ವಿನೂತನ ಪ್ರಯತ್ನ ಮಾಡಿದ್ದಾರೆ.ಮಹಾಪೌರ ಹಾಗು ಉಪ ಮಹಾಪೌರರು ಸೇರಿದಂತೆ ಕೆಲವು ಎಂಇಎಸ್ ನಗರ ಸೇವಕರು ಕರಾಳ ದಿನಾಚೆರಣೆಯಲ್ಲಿ ಪಾಲ್ಗೊಂಡು ಸರಕಾರಕ್ಕೆ ಸವಾಲು ಹಾಕಿದ್ದರು. ಸರ್ಕಾರ ಈಗ ನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಎಂಇಎಸ್ ಸದಸ್ಯರು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ವಿನಾಯಕ ಗುಂಜಟಕರ ನೇತ್ರತ್ವದಲ್ಲಿ ಹದಿನಾಲ್ಕು ಜನ ಸದಸ್ಯರು ಸತೀಶ್ ಜಾರಕಿಹೊಳಿ ಅವರನ್ನು ಭೈೀಟಿಯಾಗಿ ನಾವು ಕನ್ನಡ ಗುಂಪಿಗೆ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ.

ಮಾಹನಗರ ಪಾಲಿಕೆ ಸೂಪರ್ ಸೀಡ್ ಆಗದಿದ್ದರೆ ಕನ್ನಡ ಸದಸ್ಯರ ಜತೆಗೆ ಅಧಿಕಾರ ಹಂಚಿಕೆ ಕುರಿತು ಮಾತುಕತೆ ಮಾಡುತ್ತೇವೆ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಹೊಸ ಸೂತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೇವೆ ಎಂದು ಎಂಇಎಸ್‍ನಿಂದ ಹೊರಗೆ ಬಂದಿರುವ ನಗರ ಸೇವಕರು ಸ್ಪಷ್ಟ ಪಡಿಸಿದ್ದಾರೆ. ಮಾಜಿ ಉಪಮೇಯರ್ ಮಿನಾವಾಜ್, ನಾಗೇಶ ಮಂಡೋಳ್ಕರ್, ವಿನಾಯಕ ಗುಂಜಟಕರ್ ನೇತೃತ್ವದಲ್ಲಿ ಒಟ್ಟು ಹದಿನಾಲ್ಕು ಜನ ಸದಸ್ಯರು ಸತೀಶ ಜಾರಕಿಹೊಳಿ ಅವರನ್ನು ಭೈೀಟಿಯಾಗಿ ನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವುದು ಬೇಡ. ಕರಾಳ ದಿನಾಚರಣೆಯಲ್ಲಿ ಯಾರು ಪಾಲ್ಗೊಂಡಿದ್ದಾರೆಯೋ ಅವರ ಮೇಲೆ ಕ್ರಮ ಕೈಗೊಳ್ಳಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಎಂಇಎಸ್ ನಗರ ಸೇವಕರು ಕನ್ನಡ ಗುಂಪಿಗೆ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ ಬೆಳಗಾವಿ ಅಭಿವೃದ್ಧಿ ದೃಷ್ಠಿಯಿಂದ ಒಳ್ಳೆಯದಾಗಿದ್ದು ನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅಧಿವೇಶನ ಮುಗಿದ ಬಳಿಕ ಇನ್ನೊಂದು ಬಾರಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.ಬೆಳಗಾವಿ ರಾಜಕೀಯದಲ್ಲಿ ಮಾಸ್ಟರ್ ಮೈಂಡ್ ಎಂದೇ ಕರಿಯಿಸಿಕೊಂಡ ಸತೀಶ್ ಜಾರಕಿಹೋಳಿ ನಾಡ ದ್ರೋಹಿ ಎಂಇಎಸ್ ಅನ್ನು ಮೂರು ಭಾಗಮಾಡಿ ತನ್ನ ರಾಜಕೀಯ ಚಾಣಾಕ್ಷತನ ಮೇರೆದಿದ್ದಾರೆ. ನಾಡವಿರೋಧಿ ಎಂಇಎಸ್ ಈಗ ಮೂರು ಭಾಗವಾಗಿ ಮೂರಾಬಟ್ಟೆಯಾಗಿದೆ ಎಂದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin