ಬೆಳ್ಳಂದೂರು ಕೆರೆ ಸುತ್ತಮುತ್ತಲಿನ 97 ಕಾರ್ಖಾನೆಗಳನ್ನು ಮುಚ್ಚಲು ನೋಟಿಸ್ ಜಾರಿ
ನವದೆಹಲಿ, ಏ.19-ಬೆಳ್ಳಂದೂರು ಕೆರೆಯ ಅಪಾಯಕಾರಿ ಮಾಲಿನ್ಯಕ್ಕೆ ಅದರ ಸುತ್ತಮುತ್ತಲಿನ 97 ಕಾರ್ಖಾನೆಗಳನ್ನು ಮುಚ್ಚಲು ಕರ್ನಾಟಕ ಪರಿಸರ ನಿಯಂತ್ರಣ ಮಂಡಳಿ(ಕೆಎಸ್ಪಿಸಿಬಿ) ನೋಟಿಸ್ಗಳನ್ನು ಜಾರಿಗೊಳಿಸಿದೆ. ಈ ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದ ಪ್ರಕರಣಕ್ಕೆವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ), ಆ ಪ್ರದೇಶದ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣ ಮುಚ್ಚುವಂತೆ ನಿನ್ನೆ ಮಧ್ಯಂತರ ಆದೇಶ ನೀಡುವುದಕ್ಕೂ ಮುನ್ನವೇ ಮಂಡಳಿಯು ನೋಟಿಸ್ಗಳನ್ನು ಜಾರಿಗೊಳಿಸಿದೆ.
ಈ ಕೆರೆಯ ಸುತ್ತಮತ್ತ ಇರುವ ಎಷ್ಟು ವ್ಯಾಪ್ತಿವರೆಗೆ ಎನ್ಜಿಟಿ ಆದೇಶವನ್ನು ಅನ್ವಯಿಸಬೇಕೆಂಬ ಬಗ್ಗೆ ಮಂಡಳಿಗೆ ಸ್ಷಷ್ಟವಾಗಿಲ್ಲ. ಆದಾಗ್ಯೂ ಆದೇಶದಿಂದ ಸುಮಾರು ಶೇ.40ರಷ್ಟು ಅಂದರೆ 1,000ಕ್ಕೂ ಹೆಚ್ಚು ಕಾರ್ಖಾನೆಗಳು ಬಂದ್ ಆಗುವ ಭೀತಿ ಎದುರಾಗಲಿದೆ. ಇಂದಿನಿಂದಲೇ ಕರೆಯನ್ನು ಸ್ವಚ್ಚಗೊಳಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಈ ಕಾರ್ಯ ಆರಂಭಿಸಿರುವ ಬಗ್ಗೆ ನ್ಯಾಯಮಂಡಳಿಗೆ ಮಾಹಿತಿ ನೀಡುವಂತೆಯೂ ಎನ್ಜಿಟಿ ಕಟ್ಟಪ್ಪಣೆ ಮಾಡಿತ್ತು, ಅಲ್ಲದೇ ಅಲ್ಲದೇ ಬೆಳ್ಳಂದೂರು ಕೆರೆಗೆ ಯಾವುದೇ ತ್ಯಾಜ್ಯ ಹಾಕದಂತೆ ಹಾಗೂ ಒಂದು ವೇಳೆ ತ್ಯಾಜ್ಯ ಹಾಕಿದರೆ 5 ಲಕ್ಷ ರೂ.ಗಳ ದಂಡ ವಿಧಿಸುವಂತೆ ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರಕುಮಾರ್ ತಿಳಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS