ಬೇಡಿಕೆಗಳ ಈಡೇರಿಕೆಗೆ ಮನವಿ
ಕೋಲಾರ,ಆ.8-ತಮ್ಮ ಎಂಟು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಟೋ ರಿಕ್ಷಾ ಬಂದ್ ನಡೆಸಿದ ಚಾಲಕರು ಗಾಂಧಿವನದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲ್ಲೂಕಿನ ತ್ರಿಚಕ್ರ ವಾಹನ ಸವಾರರ ಸಂಘ, ಫೆಡರೇಷನ್ ಆಫ್ ಕರ್ನಾಟಕ, ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ವತಿಯಿಂದ ನಡೆಸಿದ ಧರಣಿ ಹಿನ್ನೆಲೆಯಲ್ಲಿ ಆಟೋಗಳು ಬೀದಿಗಿಳಿಯಲ್ಲಿಲ್ಲ.
ದಾರಿಯುದ್ದಕ್ಕೂ ಆರ್ಟಿಒ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಂದರ್ಭದಲ್ಲಿಮಾತನಾಡಿದ ಸಂಘದ ಮುಖಂಡ ಕೆ.ವಿ.ಸುರೇಶ್ ಕುಮಾರ್ ಈ ಹಿಂದೆ ನಿಗಧಿಪಡಿಸಿದಂತೆ ಕನಿಷ್ಠ 25 ರೂ. ಸರಿಯಿತ್ತು. ನಂತರದ ಪ್ರತಿ ಕಿ.ಮೀ 12 ರೂ.ಗಳನ್ನು ನಿಗದಿಪಡಿಸಬೇಕು ಸೇರಿ ದಂತೆ ವಿವಿಧ ಎಂಟು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.