ಬೇಡಿಕೆಗಳ ಮುಂದಿಟ್ಟುಕೊಂಡು ಪ್ರತಿಭಟನೆ

nanjanagudu

ನಂಜನಗೂಡು, ಸೆ.27- ತಾಲೂಕು ರೈತ ಸಂಘ ಮತ್ತು ಹಸಿರುಸೇನೆ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಸುಮಾರು 14 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ವಿಶ್ವೇಶ್ವರಯ್ಯ ವೃತ್ತದಿಂದ ಮೆರೆವಣಿಗೆ ಮಾಡಿ ತಹಸೀಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಿದರು. ಸುಮಾರು 5ಗಂಟೆಗಳ ಕಾಲ ಧರಣಿ ನಡೆಸಿದ ಇವರು, ಜಿಲ್ಲಾಧಿಕಾರಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಬರುವತನಕ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಸ್ಥಳದಲ್ಲೇ ಅಡಿಗೆ ಮಾಡಿ ಭೋಜನ ಸವಿದರು..
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಬೊಕ್ಕಳ್ಳಿ ನಂಜುಂಡಸ್ವಾಮಿ, ದಸಂಸ ತಾಲ್ಲೂಕು ಸಂಚಾಲಕ ಮಂಜುಶಂಕರಪುರ, ಸಿದ್ದರಾಜು ಹುಸ್ಕೂರು, ಸರಗೂರು ಸುರೇಶ್, ಮುದ್ದಹಳ್ಳಿ ಮಹದೇವಸ್ವಾಮಿ, ಕಳಲೆ ಮಹೇಶ್, ಸಿದ್ದು, ಶಿವಕುಮಾರ್, ಸಿದ್ದಪ್ಪ, ಗುರುಲಿಂಗೇಗೌಡ ಮತ್ತು ಹಲವಾರು ಗ್ರಾಮಗಳ ಮಹಿಳಾ ರೈತರು ಮತ್ತು ನೂರಾರು ರೈತರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin