ಬೇಸಿಗೆಯ ಬಿರು ಬಿಸಿಲು ತಾಳಲಾರದೆ ಗ್ರಾಮಕ್ಕೆ ಬಂದ ಮೊಸಳೆ
ಬಾಗಲಕೋಟೆ, ಏ.7- ಬೇಸಿಗೆಯ ಬಿರು ಬಿಸಿಲು ತಾಳಲಾರದೆ ಮೊಸಳೆಯೊಂದು ಜಿಲ್ಲೆಯ ಬೀಳಗಿ ತಾಲ್ಲೂಕಿನ ಟೆಕ್ಕಳಕಿ ಗ್ರಾಮಕ್ಕೆ ಬಂದಿದ್ದು, ಗ್ರಾಮಸ್ಥರು ಬೆಚ್ಚಿಬಿದಿದ್ದಾರೆ.ಟೆಕ್ಕಳಕಿ ಗ್ರಾಮದ ಸಮೀಪವಿರುವ ಕೃಷ್ಣಾ ನದಿಯಲ್ಲಿ ನೀರಿಲ್ಲದ ಕಾರಣ ಉಭಯವಾಸಿ ಪ್ರಾಣಿ ಮೊಸಳೆ ನೀರು ಹರಸಿ ಗ್ರಾಮಕ್ಕೆ ಬಂದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಅದನ್ನು ಹಿಡಿದು ಕಟ್ಟಿಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮೊಸಳೆಯನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸುವಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದು, ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >