ಬೈಕ್‍ಗಳು ಮುಖಾಮುಖಿ ಡಿಕ್ಕಿಯಾಗಿ ಐವರ ಸಜೀವ ದಹನ..!

Bike-Accident--01

ಕೆ.ಆರ್.ಪೇಟೆ, ಏ.27- ಡೀಸೆಲ್ ತುಂಬಿದ ಕ್ಯಾನ್ ತೆಗೆದುಕೊಂಡು ಬೈಕ್‍ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಬೈಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಸಜೀವವಾಗಿ ದಹನಗೊಂಡ ದಾರುಣ ಘಟನೆ ತಾಲ್ಲೂಕಿನ ಹನಸೋಗೆ ಬಳಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್‍ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಡೀಸೆಲ್ ರಸ್ತೆಗೆ ಚೆಲ್ಲಿದ್ದರಿಂದ ಬೆಂಕಿ ಜ್ವಾಲೆ ಹೆಚ್ಚಾಗಿ ಗಾಯಗೊಂಡು ಬಿದ್ದಿದ್ದವರು ಮೇಲೇಳಲು ಆಗದೆ ಬೆಂಕಿಯಲ್ಲಿ ದಹನಗೊಂಡಿದ್ದಾರೆ.

Nike-Accident--04

ಮೃತರನ್ನು ಚನ್ನಂಗೆರೆಯ ಸಂಜೀವ್ (21), ಪ್ರವೀಣ್ (20), ಮದನ್ (20), ಪುನೀತ್(20) ಹಾಗೂ ಸಂತೋಷ್ ಎಂದು ತಿಳಿದು ಬಂದಿದೆ. ಪಾಪಣ್ಣ ಎಂಬುವರು ಗಾಯಗೊಂಡಿದ್ದು , ಅವರ ಸ್ಥಿತಿಯೂ ಕೂಡ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಟ್ರ್ಯಾಕ್ಟರ್‍ಗೆ ಡೀಸೆಲ್ ತರಲು ಕೆ.ಆರ್.ಪೇಟೆಗೆ ತೆರಳಿದ್ದ ಸಂತೋಷ್ ಮತ್ತು ಪಾಪಣ್ಣ ಇಂದು ಬೆಳಗಿನ ಜಾವ 5.30ರ ಸಂದರ್ಭದಲ್ಲಿ ಗ್ರಾಮಕ್ಕೆ ವಾಪಸಾಗುವಾಗ ಎದುರಿನಿಂದ ಬಂದ ಪ್ರವೀಣ್, ಮದನ್ , ಪುನೀತ್ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಕೆ.ಆರ್.ಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ತಿಳಿದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬೆಳ್ಳಂ ಬೆಳಗ್ಗೆ ಈ ದುರಂತ ಸಂಭವಿಸಿದ್ದರಿಂದ ಈ ರಸ್ತೆಯಲ್ಲಿ ಹಾದು ಹೋಗುತ್ತಿದ್ದವರು ಘಟನೆ ನೋಡಿ ಬೆಚ್ಚಿ ಬಿದ್ದು ಆತಂಕಗೊಂಡಿದ್ದಾರೆ.

Nike-Accident--02

Bike-Accident--03

Sri Raghav

Admin