ಬೈಕ್, ಬೊಲೆರೋ ಮುಖಾಮುಖಿ : ಸವಾರ ಸಾವು

Spread the love

deadly--accident

ಕನಕಪುರ, ಆ.27- ಬೈಕ್ ಹಾಗೂ ಬೊಲೆರೋ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮರಳವಾಡಿ ರಸ್ತೆ ಕರಿಕಲ್‍ದೊಡ್ಡಿ ಗೇಟ್ ಬಳಿ ಸಂಭವಿಸಿದೆ.ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಗೌರಿಪುರ ನಿವಾಸಿ ರಮೇಶ್ (35) ಮೃತ ದುರ್ದೈವಿ.ಜೆಸಿಬಿ ಡ್ರೈವರ್ ಕೆಲಸಕ್ಕಾಗಿ ಗೌರಿಪುರದಿಂದ ಇಲ್ಲಿಗೆ ಬಂದಿದ್ದ ರಮೇಶ್  ದೇವಾಲಯದ ಮರದಹಗ್ಗು ಗ್ರಾಮದಲ್ಲಿ ವಾಸವಿದ್ದರು.ಹಾರೋಹಳ್ಳಿಯಿಂದ ಮರಳವಾಡಿಗಿ ತೆರಳುವ ವೇಳೆ ಅಪಘಾತ ಸಂಭವಿಸಿದೆ. ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ವಾಹನಗಳನ್ನು ವಶಕ್ಕೆಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin