ಬೈಕ್ ಸಾಹಸದಲ್ಲಿ ದಾಖಲೆ ಬರೆದ ಬಾಲಕಿ
ಮೈಸೂರು,ಸೆ.23- ದಸರಾ ಎಂದ ಕೂಡಲೇ ಹಲವಾರು ಸಾಂಸ್ಕøತಿಕ, ಮನರಂಜನಾ ಕಾರ್ಯಕ್ರಮಗಳು ಮುದ ನೀಡಿದರೆ, ಸಾಹಸ ಕಾರ್ಯಕ್ರಮಗಳು ನೋಡುಗರ ಎದೆ ಝಲ್ಲೆನಿಸುತ್ತವೆ.ಜೆಕೆ ಮೈದಾನದಲ್ಲಿ ಕೆಂಪುಧೂಳು ಎದ್ದುದನ್ನು ಕಂಡ ಪ್ರವಾಸಿಗರು ಕುತೂಹಲದಿಂದ ಅತ್ತ ಧಾವಿಸಿದಾಗ ಏಳು ವರ್ಷದ ಬಾಲೆಯೊಬ್ಬಳು ಬೈಕ್ ಸವಾರಿ ಸಾಹಸ ಮಾಡುವುದರ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದಳು. ರಿಫಾ ತಸ್ಕೀನ್ ಎಂಬ ಈ ಬಾಲೆ ಬೆಸೆಟ್ ಬೈಕ್ ಸವಾರಿ ಮಾಡುವ ಮೂಲಕ ರೋಮಾಂಚನಕಾರಿ ಪ್ರದರ್ಶನ ನೀಡಿ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದಳು.
ನಗರದ ಸಂತ ಜೋಸೆಫ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ರಿಫಾ ತಸ್ಕೀನ್ ವಲ್ರ್ಡ್ ಚಾಂಪಿಯನ್ ಆಗಬೇಕೆಂಬುದು ತಂದೆ ತಾಜಾವುದ್ದೀನ್, ತಾಯಿ ಬೇಬಿ ಫಾತಿಮಾ ಅವರ ಹೆಬ್ಬಯಕೆ. ಗಂಡು ಮಕ್ಕಳು ಇಲ್ಲದ ಕಾರಣ ಈಕೆಯನ್ನೇ ಗಂಡು ಮಗುವಿನಂತೆ ಬೆಳೆಸಿದ್ದೇವೆ. ಮೋದಿಯವರ ಬೇಟಿ ಬಚಾವೊ, ಬೇಟಿ ಪಢಾವೋ, ಘೋಷಣೆಯಿಂದ ಪ್ರಭಾವಿತರಾಗಿದ್ದೇವೆ. ತಮ್ಮ ಮಗಳನ್ನು ವಿಶ್ವ ಚಾಂಪಿಯನ್ ಮಾಡಬೇಕೆಂಬುದೇ ನಮ್ಮ ಆಸೆ ಎಂದು ಹೇಳುತ್ತಾರೆ.
ಐದು ಚಕ್ರದ ವಾಹನ ಇದಾಗಿದ್ದು , ನಾನೇ ಬೈಕ್ನ್ನು ವಿನ್ಯಾಸಗೊಳಿಸಿದ್ದೇನೆ ಎಂದು ತಂದೆ ತಾಜಾವುದ್ದೀನ್ ತಿಳಿಸಿದ್ದಾರೆ. ಈಕೆ ಬೈಕ್ನ್ನು ಹಿಮ್ಮುಖವಾಗಿ ಏಕಕಾಲದಲ್ಲಿ 50 ರೌಂಡ್ಗಳನ್ನು ಸುತ್ತಿಸಿ ಗಿನ್ನಿಸ್ ದಾಖಲೆಗೆ ಯತ್ನಿಸಿರುವುದಾಗಿ ತಿಳಿಸಿದ್ದಾರೆ.