ಬೋಯಿಂಗ್ ವಿಮಾನಗಳಿಗೆ 80 ಸಹ-ಪೈಲೆಟ್‍ಗಳ ನೇಮಕ

Spread the love

Air-India-01

ಮುಂಬೈ, ಏ.23-ಕಾಕ್‍ಪಿಟ್‍ನಲ್ಲಿ (ಪೈಲೆಟ್‍ಗಳು ಚಾಲನೆ ಮಾಡುವ ಸ್ಥಳ) ಪೈಲೆಟ್‍ಗಳ ಕೊರತೆ ನೀಗಿಸಲು ತನ್ನ ಅಗಲವಾಗಿ ಬೋಯಿಂಗ್ ವಿಮಾನಗಳಿಗೆ 80 ಜ್ಯೂನಿಯರ್ ಪೈಲೆಟ್‍ಗಳನ್ನು ನೇಮಕ ಮಾಡಲು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮುಂದಾಗಿದೆ.   ತನ್ನ ಬಿ-777 ಮತ್ತು ಬಿ-787 ವಿಮಾನಗಳಿಗೆ 80 ಸಹ ಪೈಲೆಟ್‍ಗಳನ್ನು ನಿಯೋಜಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ನೂತನ ಸಿಬ್ಬಂದಿ ಮುಂದಿನ ತಿಂಗಳು ನೇಮಕಗೊಳ್ಳುವ ನಿರೀಕ್ಷೆ ಇದೆ ಎಂದು ಏರ್‍ಲೈನ್ ಮೂಲಗಳು ತಿಳಿಸಿವೆ. ಏರ್ ಇಂಡಿಯಾದ 15ಬಿ777 ಮತ್ತು 23 ಬಿ787 ವಿಮಾನಗಳಿಗೆ 170 ಸಹ-ಪೈಲೆಟ್‍ಗಳು ಇದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin