ಬೌದ್ಧರ ನಾಡಿನ ಧರ್ಮಾರ್ಥ ಗಜ ಕ್ರೀಡೆ ಬಗ್ಗೆ ಗೊತ್ತೆ..?

ds-polo-5
ಮನುಷ್ಯರಿಗಿಂತ ಶ್ರಮವಹಿಸಿ ಕೆಲಸ ಮಾಡುವ ಪ್ರಾಣಿಗಳ ಸಂಖ್ಯೆಯೂ ದೊಡ್ಡದು. ದೈತ್ಯಾ ಕಾರದ ಆನೆ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.
ಇಂಥ ಪರಿಶ್ರಮ ಜೀವಿಗಳ ಬಗ್ಗೆ ಜನಜಾಗೃತಿ ಮೂಡಿಸಲು ಥೈಲೆಂಡ್‍ನಲ್ಲಿ ಎಲಿಫೆಂಟ್ ಪೋಲೊ ನಡೆಯಿತು. ಈ ಗಜ ಕ್ರೀಡೆಯನ್ನು ನಾವೂ ನೋಡೋಣವೇ.. ಥೈಲೆಂಡ್‍ನಲ್ಲಿ ನಡೆದ ವಾರ್ಷಿಕ ಎಲಿಫೆಂಟ್ ಪೋಲೊ ಚಾರಿಟಿ ಟೂರ್ನಮೆಂಟ್‍ನಲ್ಲಿ 50 ಮಂದಿ ಪಾಲ್ಗೊಂಡರು. ಬೌದ್ಧರ ನಾಡಿನಲ್ಲಿರುವ ಸಾಕಾನೆಗಳಿಗೆ ಹಣ ಕ್ರೋಢೀಕರಿಸುವ ಉದ್ದೇಶದೊಂದಿಗೆ ಧರ್ಮಾರ್ಥ ಗಜ ಕ್ರೀಡೆ ನಡೆಯಿತು. ನಾಲ್ಕು ದಿನಗಳ ಕಾಲ ನಡೆದ ಈ ಕ್ರೀಡೆಯಿಂದ ಲಭಿಸುವ ಹಣವನ್ನು ಆನೆಗಳ ಸಂರಕ್ಷಣಾ ಯೋಜನೆಗಾಗಿ ಬಳಸಲಾಗುತ್ತದೆ.

ಮಾವುತರು ಆನೆಗಳನ್ನು ನಿರ್ವಹಿಸುತ್ತಿದ್ದರೆ, ಅವುಗಳ ಮೇಲೆ ಕುಳಿತಿದ್ದ ಆಟಗಾರರು ಲೋಹದ ದಾಂಡಿನೊಂದಿಗೆ ಚೆಂಡನ್ನು ಬಡಿಯಲು ಯತ್ನಿಸಿದರು. ಕುದುರೆ ಮೇಲೆ ಕುಳಿತು ಪೋಲೊ ಆಡುವುದಕ್ಕಿಂತ ಗಜಗಳನ್ನು ಬಳಸಿ ಈ ಆಟವಾಡುವುದು ವಿಭಿನ್ನ ಅನುಭವ ಎಂದು ಅನೇಕ ಆಟಗಾರರು ಹೇಳಿದರು. ಥೈಲೆಂಡ್‍ನಲ್ಲಿ ಸುಮಾರು 3,000 ಆನೆಗಳು ಅರಣ್ಯದಲ್ಲಿ ದ್ದರೆ, 4,000 ಗಜಗಳನ್ನು ಸ್ಥಳೀಯವಾಗಿ ಸಾಕಲಾಗುತ್ತಿದೆ. ಅರಣ್ಯನಾಶ, ಕ್ಷಿಪ್ರ ನಗರೀಕರಣ ಮತ್ತು ದಂತಕ್ಕಾಗಿ ಆನೆಗಳ ಬೇಟೆ ಇವುಗಳಿಂದಾಗಿ ಅನೆಗಳ ಸಂಖ್ಯೆ ಕ್ಷೀಣಿಸುತ್ತಿದೆ.

ds-polo-3 ds-polo-2 ds-polo-1 ds-polo

Sri Raghav

Admin