ಬ್ಯಾಂಕ್‍ಗಳ ಭದ್ರತೆಗೆ 3500 ಪೊಲೀಸರ ನಿಯೋಜನೆ

Spread the love

Ban-security

ನವದೆಹಲಿ,ನ.10– ಅನರ್ಹ ನೋಟುಗಳ ವಿನಿಮಯ ಮತ್ತು ಹೊಸ ಕರೆನ್ಸಿ ಪಡೆಯಲು ಭಾರೀ ಜನಸ್ತೋಮ ಜಮಾಯಿಸಿರುವ ಕಾರಣ ರಾಷ್ಟ್ರ ರಾಜಧಾನಿಯಲ್ಲಿನ ಬ್ಯಾಂಕ್‍ಗಳಿಗೆ ಭದ್ರತೆಗಾಗಿ 3500 ಅರೆಸೇನಾ ಪಡೆ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.  ಈ ವಹಿವಾಟು ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ತಪ್ಪಿಸುವ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್‍ಗಳ ಮುಂದೆ ವ್ಯಾಪಕ ಭದ್ರತೆ ವಹಿಸಲಾಗಿದೆ. ಬುತೇಕ ಬ್ಯಾಂಕ್‍ಗಳ ಮುಂದೆ ಭಾರೀ ಸಂಖ್ಯೆಯ ಜನರು ಸರತಿ ಸಾಲಿನಲ್ಲಿ ನಿಂತು ಹೊಸ ನೋಟು ಪಡೆಯಲು ಗಂಟೆಗಟ್ಟಲೇ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ದೇಶದ ವಾಣಿಜ್ಯ ನಗರಿ ಮುಂಬೈ, ಕೋಲ್ಕತ, ಚೆನ್ನೈ ಸೇರಿದಂತೆ ದೇಶದ ಎಲ್ಲ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಎಲ್ಲೆಡೆ ಬ್ಯಾಂಕ್‍ಗಳ ಮುಂದೆ ಬಂದೋಬಸ್ತ್ ಮಾಡಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin