ಬ್ಯಾಡ್ಮಿಂಟನ್ ತಾರೆ ಸೈನಾ ಪಾತ್ರದಲ್ಲಿ ಶ್ರದ್ಧಾ

Spread the love

Shraddha-Kapoor

ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂ ಸಹೋದರಿ, ಲೇಡಿ ಡಾನ್ ಹಸೀನಾ ಪರ್ಕರ್ ಪಾತ್ರದಲ್ಲಿ ನಟಿಸಿ ಗಮನಸೆಳೆಯುತ್ತಿರುವ ಬಾಲಿವುಡ್ ಲವ್ಲಿ ಡಾಲ್ ಶ್ರದ್ಧಾ ಕಪೂರ್ ಈಗ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಗಾಥೆ ಸಿನಿಮಾದಲ್ಲೂ ಮಿಂಚಲಿದ್ದಾಳೆ. ಭಾರತದ ಮುಂಚೂಣಿ ಬ್ಯಾಡ್ಮಿಂಟನ್ ಆಟಗಾತಿ ಸೈನಾ ಪಾತ್ರದಲ್ಲಿ ತಾನು ನಟಿಸುತ್ತಿರುವುದನ್ನು ಶ್ರದ್ಧಾ ಖಚಿತಪಡಿಸಿದ್ದಾಳೆ. ಅಮೋಲ್ ಗುಪ್ತೆ ನಿರ್ದೇಶನದ ಈ ಸಿನಿಮಾ 2018ರಲ್ಲಿ ಬಿಡುಗಡೆಯಾಗಲಿದೆ. ನಂಬರ್ 1 ಬ್ಯಾಡ್ಮಿಂಟನ್ ತಾರೆಯ ಜೀವನ-ಸಾಧನೆಗಳ ಬಗ್ಗೆ ಮುತುವರ್ಜಿಯಿಂದ ವಿಷಯಗಳನ್ನು ಸಂಗ್ರಹಿಸಿರುವ ನಿರ್ದೇಶಕರು, ಈ ಪಾತ್ರಕ್ಕೆ ಶ್ರದ್ಧಾಳೇ ಸೂಕ್ತ ಎಂದು ಆಯ್ಕೆ ಮಾಡಿದ್ದಾರೆ. ಆಕೆ ತುಂಬಾ ಪ್ರತಿಭಾವಂತ ಹಾಗೂ ಕಷ್ಟಸಹಿಷ್ಣು ನಟಿ. ಇದೇ ಕಾರಣಕ್ಕಾಗಿ ಆಕೆಯನ್ನು ಸೈನಾ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕ ಅಮೋಲ್ ಹೇಳಿದ್ದಾರೆ.

ಓರ್ವ ಜನಪ್ರಿಯ ಕ್ರೀಡಾಪಟುವಿನ ಪಾತ್ರ ನಿರ್ವಹಿಸುವುದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ತಯಾರಿ ನಡೆಸಬೇಕು ಮತ್ತು ಕಸರತ್ತು ನಡೆಸಬೇಕು. ಸೈನಾಳಂತೆ ಫಿಟ್‍ನೆಸ್ ಬರಲು ವರ್ಕ್‍ಔಟ್ ಮಾಡಬೇಕು. ಆದರೆ ಇದು ಶ್ರದ್ಧೆಯ ನಟಿ ಶ್ರದ್ಧಾಗೆ ಕಷ್ಟವಾಗಲಾರದು. ಏಕೆಂದರೆ ಆಕೆ ಕಾಲೇಜು ದಿನಗಳಲ್ಲಿ ಕ್ರೀಡಾಪಟುವಾಗಿದ್ದವಳು.ಬ್ಯಾಡ್ಮಿಂಟನ್ ಈ ನಟಿಗೆ ಅಚ್ಚುಮೆಚ್ಚಿನ ಕ್ರೀಡೆ. ಈ ಹಿಂದೆ ಸಿನಿಮಾದ ಸನ್ನಿವೇಶಕ್ಕಾಗಿ ವಾಲಿಬಾಲ್ ಮತ್ತು ಬ್ಯಾಸ್ಕೆಟ್‍ಬಾಲ್ ಆಟಗಳನ್ನು ಆಸಕ್ತಿಯಿಂದ ಕಲಿತಿದ್ದಳು. ಹೀಗಾಗಿ ಸೈನಾ ಪ್ರಾತಕ್ಕೆ ಈ ಗ್ಲಾಮರ್ ನಟಿ ನ್ಯಾಯ ಒದಗಿಸುತ್ತಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin