ಬ್ಯಾರೇಜ್ ಕಂ ಬ್ರಿಡ್ಜ್ ಕಾಮಗಾರಿ ಶೀಘ್ರ ಆರಂಭ : ಸುಧಾಕರ್

Spread the love

hiriyuru

ಹಿರಿಯೂರು, ಸೆ.6– ತಾಲೂಕಿನ ಸುವರ್ಣಮುಖಿ ಹಾಗೂ ವೇದಾವತಿ ನದಿಪಾತ್ರಗಳ ಕುಂದಲಗುರ, ಸಮುದ್ರದಹಳ್ಳಿ, ಟಿ.ನಾಗೇನಹಳ್ಳಿ-ಹಳೇಯಳನಾಡು ಹಾಗೂ ಕೂಡ್ಲಹಳ್ಳಿಗಳ ಬಳಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣಕ್ಕೆ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳಳಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದೆಂದು ಶಾಸಕ ಡಿ.ಸುಧಾಕರ್ ಹೇಳಿದರು.ತಾಲೂಕಿನ ಹೊಸಯಳನಾಡು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಆಲೂರು ಗ್ರಾಮದಲ್ಲಿ ಅಯೋಜಿಸಲಾಗಿದ್ದ ನೀರು ಶುದ್ಧೀಕರಣ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಯೋಜಿಸಲಾಗಿದ್ದ ಐದು ನಿಗದಿತ ಪ್ರದೇಶಗಳಲ್ಲಿನ ಬ್ಯಾರೇಜ್ ಕಂ ಬ್ರಿಡ್ಜ್ ಗಳ ನಿರ್ಮಾಣ ಯೋಜನೆಗೆ ಆಂಧ್ರಪ್ರದೇಶ ವ್ಯಾಪ್ತಿಯ ರೈತರು ತಕರಾರು ಎತ್ತಿದ್ದರು. ಹಾಗೆಯೇ ಈ ಸಂಬಂಧ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿತ್ತು.

ಆದರೆ ಕಾನೂನು ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ವಿವಿ ಸಾಗರಕ್ಕೆ ಹರಿಸಲಾಗುವ 0.25 ಟಿಎಂಸಿ ನೀರನ್ನು ಬ್ಯಾರೇಜ್‍ಗಳಿಗೆ ಪೂರೈಕೆ ಮಾಡುವ ಪರಿಹಾರ ಮಾರ್ಗ ರೂಪಿಸಿದ ಮೇಲೆ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ ಎಂದರು.  ಪ್ರಸ್ತುತ ಆರಂಭಿಕ ಹಂತದ ಬ್ಯಾರೇಜ್ ನಿರ್ಮಾಣ ಸ್ಥಳಗಳಾದ ಕುಂದಲಗುರ ಗ್ರಾಮಗಳಿಗೆ ಸಣ್ಣ ನೀರಾವರಿ ಸಚಿವರಾದ ಜಯಚಂದ್ರ ಹಾಗೂ ತಜ್ಞ ಇಂಜಿನಿಯರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಗುವುದೆಂದರು.

ಆಯಕಟ್ಟಿನ ನದಿಪಾತ್ರಗಳಲ್ಲಿ ನೀರು ಸಂಗ್ರಹವಾಗಿ ಕಿಲೋ ಮೀಟರ್‍ಗಳ ಉದ್ದಕ್ಕೂ ನಿಲ್ಲುವುದರಿಂದ ಅಕ್ರಮ ಮರಳು ದಂಧೆಗೆ ಶಾಶ್ವತವಾಗಿ ಕಡಿವಾಣ ಹಾಕಿದಂತಾಗುವುದೆಂದು ಅವರು ತಿಳಿಸಿದರು.ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ, ಜಿಪಂ ಸದಸ್ಯಿಣಿ ಗೀತಾ ನಾಗಕುಮಾರ್, ತಾಪಂ ಅಧ್ಯಕ್ಷ ಚಂದ್ರಪ್ಪ, ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ತಾಪಂ ಸದಸ್ಯರಾದ ಕೆ.ಓಂಕಾರಪ್ಪ, ತಿಪ್ಪಮ್ಮ ನಾಗರಾಜ್, ಮುಕುಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮುಖಂಡರಾದ ಆಲೂರು ನಾಗೇಶ್, ಟಿಪ್ಪು, ಈರಲಿಂಗೇಗೌಡ ಪಿಡಿಒ ನಾಗಮಣಿ, ಶಾಸಕರ ಆಪ್ತ ಸಹಾಯಕ ಕೆ.ಪ್ರಕಾಶ್ ಮತ್ತಿತರರುಸ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin