ಬ್ರಹ್ಮಪುತ್ರ ಉಪನದಿಯೊಂದನ್ನು ಬಂದ್ ಮಾಡಿ ಹೊಸ ತಗಾದೆ ತೆಗೆದ ಚೀನಾ

China

ನವದೆಹಲಿ, ಅ.1-ಪಾಕಿಸ್ತಾನದ ಜೊತೆ ಸಿಂಧೂ ಜಲ ಒಪ್ಪಂದ ರದ್ದುಗೊಳಿಸುವ ಬಗ್ಗೆ ಭಾರತ ಗಂಭೀರವಾಗಿ ಪರಿಶೀಲಿಸುತ್ತಿರುವಾಗಲೇ ಚೀನಾ ಟಿಬೆಟ್‍ನಲ್ಲಿ ಬ್ರಹ್ಮಪುತ್ರ ಉಪನದಿಯೊಂದನ್ನು ಬಂದ್ ಮಾಡಿ ಹೊಸ ತಗಾದೆ ತೆಗೆದಿದೆ. ತನ್ನ ಬೃಹತ್ ವೆಚ್ಚದ ಜಲ ಯೋಜನೆಗಾಗಿ ಅಣೆಕಟ್ಟು ನಿರ್ಮಿಸಲು ಚೀನಾ ಕೈಗೊಂಡಿರುವ ಈ ಕ್ರಮ ಭಾರತಕ್ಕೆ ಕಳವಳ ಉಂಟು ಮಾಡಿದೆ. ಯಾರ್ಲುಂಗ್ ಜಾಂಗ್‍ಬೋ (ಬ್ರಹ್ಮಪುತ್ರ ನದಿಗೆ ಟಿಬೆಟ್‍ನಲ್ಲಿ ಹೀಗೆ ಕರಯಲಾಗುತ್ತದೆ) ನದಿಯ ಉಪನದಿ ಕ್ಸಿಯಾಬುರ್ಕ್‍ಗೆ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಉಪನದಿಯನ್ನು ಬಂದ್ ಮಾಡಿರುವುದರಿಂದ ಕೆಳ ಜಲಾನಯನ ದೇಶಗಳಿಗೆ ತೊಂದರೆಯಾಗುತ್ತದೆ ಎಂಬುದು ಭಾರತದ ಕಳವಳಕ್ಕೆ ಕಾರಣವಾಗಿದೆ.

► Follow us on –  Facebook / Twitter  / Google+

Sri Raghav

Admin