ಬ್ರಿಕ್ಸಿಟ್ ಮಸೂದೆಗೆ ಸೋಲು, ಥೆರೇಸಾ ಮೇಗೆ ಭಾರೀ ಹಿನ್ನಡೆ

Theresa-May--02

ಲಂಡನ್, ಮಾ.2-ಐರೋಪ್ಯ ಒಕ್ಕೂಟದಿಂದ ಬ್ರಿಟನ್‍ನನ್ನು ಹೊರಕ್ಕೆ ತರುವ ಪ್ರಧಾನಿ ಥೆರೇಸಾ ಮೇ ಅವರ ಯತ್ನಕ್ಕೆ ಭಾರೀ ಹಿನ್ನಡೆಯಾಗಿದೆ. ಬ್ರಿಕ್ಸಿಟ್ (ಬ್ರಿಟನ್ ಮತ್ತು ಎಕ್ಸಿಟ್‍ನ ಸಂಕ್ಷಿಪ್ತ ರೂಪ) ತಿದ್ದುಪಡಿ ಮಸೂದೆಗೆ ಬ್ರಿಟನ್ ಮೇಲ್ಮನೆಯಲ್ಲಿ ಸೋಲುಂಟಾಗಿದ್ದು ಈ ವಿಷಯದಲ್ಲಿ ಇದೇ ಮೊದಲ ಬಾರಿ ಮೇ ಪರಾಭವಗೊಂಡಿದ್ದಾರೆ.   ಈ ಸೋಲಿನೊಂದಿಗೆ ಯುರೋಪ್ ಸಮುದಾಯದಿಂದ ಯುನೈಟೆಡ್ ಕಿಂಗ್‍ಡಮ್‍ನನ್ನು ಪ್ರತ್ಯೇಕಗೊಳಿಸಲು ಮಾತುಕತೆಗೆ ಆರಂಭಿಸಲು ಪುಷ್ಠಿ ನೀಡುವ ಮಸೂದೆ ಜಾರಿ ವಿಳಂಬವಾಗಿದೆ.   ಬ್ರಿಕ್ಸಿಟ್ ನಂತರ ಇಂಗ್ಲೆಂಡ್‍ನಲ್ಲಿರುವ ಐರೋಪ್ಯ ಒಕ್ಕೂಟದ ರಾಷ್ಟ್ರೀಯರ ಹಕ್ಕುಗಳನ್ನು ರಕ್ಷಿಸಲು ಸಚಿವರಿಗೆ ಅಗತ್ಯವಾದ ತಿದ್ದುಪಡಿ ಮಸೂದೆಗೆ ಹೌಸ್ ಆಫ್ ಲಾಡ್ರ್ಸ್‍ನಲ್ಲಿ ನಿನ್ನೆ ಹಿನ್ನಡೆಯಾಯಿತು. 358 ಸದಸ್ಯರಲ್ಲಿ 256 ಮಂದಿ ಮಸೂದೆ ವಿರುದ್ಧ ಮತ ಚಲಾಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin