ಬ್ರೆಜಿಲ್‍’ನಲ್ಲಿ ಪೊಲೀಸ್ ಮುಷ್ಕರದ ವೇಳೆ ಹಿಂಸಾಚಾರ, 100ಕ್ಕೂ ಹೆಚ್ಚು ಮಂದಿ ಸಾವು

Spread the love

Brazil

ವಿಟೋರಿಯಾ, ಫೆ.10-ತೀವ್ರ ಆರ್ಥಿಕ ಸಂಕಷ್ಟದ ನಡುವೆಯೂ ವೇತನ ಹೆಚ್ಚಳಕ್ಕಾಗಿ ಕಳೆದ ಆರು ದಿನಗಳಿಂದ ಬ್ರೆಜಿಲ್‍ನ ಎಸ್‍ಪಿರಿಟೋ ಸ್ಯಾಂಟೋ ರಾಜ್ಯದಲ್ಲಿ ಪೊಲೀಸರು ನಡೆಸುತ್ತಿರುವ ಮುಷ್ಕರದ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಯನ್ನು ನಿಯೋಜಿಸಲಾಗಿದೆ.
ಬ್ರೆಜಿಲ್ ರಾಜಧಾನಿ ರಿಯೊ-ಡಿ-ಜನೈರೊದ ಕರಾವಳಿ ನಗರಿ ಎಲ್‍ಪರಿಟೋದ ಸ್ಯಾಂಟೋದ ವಿಟೋರಿಯಾ ನಗರದಲ್ಲಿ ಪೊಲೀಸ್ ಪ್ರತಿಭಟನೆಯ ತೀವ್ರತೆ ಹೆಚ್ಚಾಗಿತ್ತು. ತಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಸಾರ್ವಜನಿಕರನ್ನು ಪೊಲೀಸರು ಒತ್ತಾಯಿಸಿದಾಗ ಹಿಂಸಾಚಾರ ನಡೆಯಿತು. ಸುಮಾರು 1,500 ಪ್ರತಿಭಟನಾನಿರತ ಪೊಲೀಸರು ಮತ್ತು ಯೋಧರ ನಡುವೆಯೂ ಘರ್ಷಣೆಗೆ ಕಾರಣವಾಯಿತು.

Protest--0101

ಕಳೆದ ಆರು ದಿನಗಳಿಂದ ನಡೆದ ಘರ್ಷಣೆ ಮತ್ತು ಹಿಂಸಾಚಾರಗಳಲ್ಲಿ ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸತ್ತವರಲ್ಲಿ ಪೊಲೀಸರು ಮತ್ತು ಸಾರ್ವಜನಿಕರೂ ಸೇರಿದ್ದಾರೆ ಎಂದು ಸರ್ಕಾರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರತಿಭಟನೆ ಬೇರೆ ರಾಜ್ಯಗಳಿಗೂ ಹಬ್ಬುವ ಆತಂಕವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin