ಬ್ಲಡ್ ಬ್ಯಾಂಕುಗಳು-ಆಸ್ಪತ್ರೆಗಳ ನಡುವಿನ ಸಮಸ್ವಯತೆಯ ಕೊರತೆಯಿಂದ ವ್ಯರ್ಥವಾಯ್ತು 28 ಲಕ್ಷ ಯೂನಿಟ್ ರಕ್ತ..!

Spread the love

Boold--0001

ಮುಂಬೈ, ಏ.24- ರಕ್ತದಾನ ಮಹಾದಾನ ಎಂಬ ಧ್ಯೇಯ ವ್ಯಾಕದ ಅಡಿ ಪ್ರಾಣಾಧಾರ ರಕ್ತವನ್ನು ದಾನ ಮಾಡಲು ಜನಜಾಗೃತಿಗಾಗಿ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡುತ್ತಿದೆ. ಆದರೆ ಇಷ್ಟೆಲ್ಲಾ ಮಾಡಿದರೂ ಬ್ಲಡ್ ಬ್ಯಾಂಕುಗಳು ಮತ್ತು ಆಸ್ಪತ್ರೆಗಳ ಸಮನ್ವಯದ ಕೊರತೆಯಿಂದಾಗಿ ಐದು ವರ್ಷಗಳಲ್ಲಿ 28 ಲಕ್ಷ ಯೂನಿಟ್ (6 ಲಕ್ಷ ಲೀಟರ್) ರಕ್ತ ವ್ಯಥವಾಗುತ್ತಿದೆ. ನೀರಿನ ಪ್ರಮಾಣದಲ್ಲಿ ಹೇಳುವುದಾದರೆ ಇದು 53 ದೊಡ್ಡ ವಾಟರ್ ಟ್ಯಾಂಕ್‍ಗಳಿಗೆ ಸಮ.  ರಕ್ತ ಮತ್ತು ಅದಕ್ಕೆ ಸಂಬಂಧಪಟ್ಟ ಘಟಕಾಂಶಗಳು ಇಷ್ಟು ಪ್ರಮಾಣದಲ್ಲಿ ಪೋಲಾಗುತ್ತಿರುವುದು ದೇಶದ ವಿವಿಧ ರಕ್ತ ಬ್ಯಾಂಕುಗಳು ಮತ್ತು ಆಸ್ಪತ್ರೆಗಳ ನ್ಯೂನತೆಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ.ದೇಶದಲ್ಲಿ ಅಪಘಾತ ಪ್ರಕರಣಗಳು ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಲ್ಲದೇ ಹೆರಿಗೆ ಸಂದರ್ಭದಲ್ಲಿ ಮರಣವನ್ನಪ್ಪುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಸಕಾಲದಲ್ಲಿ ರಕ್ತ ಲಭಿಸದೆ ಇರುವುದು ಈ ಸಾವುಗಳಿಗೆ ಒಂದು ಕಾರಣ. ಭಾರತದಲ್ಲಿ ಪ್ರತಿ ವರ್ಷ 30 ಲಕ್ಷ ಯೂನಿಟ್ ರಕ್ತದ ಕೊರತೆ ಇದೆ. ಇಂಥ ಸಂದರ್ಭದಲ್ಲೇ ಈಗಾಗಲೇ 28 ಲಕ್ಷ ಯೂನಿಟ್ ರಕ್ತ ನಿರರ್ಥಕವಾಗಿ ಪೋಲಾಗಿರುವುದು ದುರದೃಷ್ಟಕರ.   ರಕ್ತ ಅಧಿಕ ಪ್ರಮಾಣಗಳಲ್ಲಿ ಪೋಲಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ತಮಿಳುನಾಡು ಅಗ್ರಸ್ಥಾನದಲ್ಲಿದೆ. 2016-17ನೇ ಸಾಲಿನಲ್ಲಿ 6.67 ಲಕ್ಷ ಯೂನಿಟ್ ರಕ್ತ ವ್ಯರ್ಥವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin