ಭದ್ರಾಚಲಂನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶೇಷ ಪೂಜೆ

Spread the love

Devegowda

ವಿಜಯವಾಡ,ಆ.29- ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಶ್ರೀರಾಮ ಪ್ರತ್ಯಕ್ಷವಾದ ಎಂದು ಪ್ರತೀತಿ ಇರುವ ಭದ್ರಾಚಲಂಗೆ ಭೇಟಿ ನೀಡಿದ್ದು, ಶ್ರೀರಾಮ, ಕನಕ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.  ಪತ್ನಿ ಚನ್ನಮ್ಮನವರೊಂದಿಗೆ ಹೆಲಿಕಾಪ್ಟರ್ನಲ್ಲಿ ವಿಜಯವಾಡಕ್ಕೆ ಆಗಮಿಸಿದ ಅವರು, ಭದ್ರಾಚಲಂ ರಾಮಾಲಯ ಹಾಗೂ ಕನಕ ದುರ್ಗಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.   ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ಗೌಡರನ್ನು ಬರಮಾಡಿಕೊಳ್ಳಲಾಯಿತು. ದೇವರ ದರ್ಶನ ಪಡೆದ ನಂತರ ಗೌಡರು ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನಿಂದಲೂ ಭದ್ರಾಚಲಂ ರಾಮಾಲಯಕ್ಕೆ ಬರಬೇಕೆಂದುಕೊಂಡಿದ್ದೆ. ಈಗ ಬಂದಿದ್ದೇನೆ ಎಂದು ಹೇಳಿದ್ದಾರೆ.

ಉತ್ತರದಿಂದ ದಕ್ಷಿಣದವರೆಗೆ ದೇಶದ ಬಹುತೇಕ ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಶ್ರೀರಾಮನ ದೇವಾಲಯಗಳಲ್ಲಿ ಒಂದಾದ ಭದ್ರಾಚಲಂ ದೇವಾಲಯಕ್ಕೆ ಇದೇ ಮೊದಲ ಬಾರಿಗೆ ಬಂದಿದ್ದೇನೆ ಎಂದು ಗೌಡರು ತಿಳಿಸಿದ್ದಾರೆ. ಪಕ್ಷದ ಸಂಘಟನೆ ಸೇರಿದಂತೆ ಮುಂದಿನ ಹೋರಾಟಕ್ಕೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಗೌಡರು ತಿಳಿಸಿದರು.  ಇಂದು ರಾತ್ರಿ ಬೆಂಗಳೂರಿಗೆ ಗೌಡರು ವಾಪಸಾಗಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Facebook Comments

Sri Raghav

Admin