ಭಯೋತ್ಪಾದಕನನ್ನ ಹುತಾತ್ಮನೆನ್ನಬಾರದು : ರಾಜನಾಥ್‍ಸಿಂಗ್

Spread the love

aGDESGSDFGನವದೆಹಲಿ, ಆ.5– ಒಂದು ದೇಶದ ಭಯೋತ್ಪಾದಕ ಬೇರೆಯವರಿಗೆ ಹುತಾತ್ಮನಾಗಬಾರದು ಎಂದು ದೃಢವಾದ ಮಾತುಗಳಲ್ಲಿ ಹೇಳಿರುವ ಭಾರತ, ಭಯೋತ್ಪಾದನೆಗೆ ಬೆಂಬಲ ನೀಡುವವರು ಹಾಗೂ ಅದರಲ್ಲಿ ತೊಡಗುವವರಿಗೆ ಆಶ್ರಯ ಕಲ್ಪಿಸುವವರ ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಾಕಿಸ್ತಾನ ಸೇರಿದಂತೆ ಸಾರ್ಕ್ ದೇಶಗಳಿಗೆ ಆಗ್ರಹಪಡಿಸಿದೆ. ಏಳನೆ ಸಾರ್ಕ್ ಗೃಹ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇಸ್ಲಾಮಾಬಾದ್ ಭೇಟಿಯಲ್ಲಿರುವ ಗೃಹ ಸಚಿವ ರಾಜನಾಥ್‍ಸಿಂಗ್ ರಾಜ್ಯಸಭೆಗೆ ನೀಡಿರುವ ಹೇಳಿಕೆಯೊಂದರಲ್ಲಿ ಭಯೋತ್ಪಾದನೆ ನಿಗ್ರಹ ಕುರಿತು ಪ್ರಸ್ತಾಪಿಸಿದ್ದಾರೆ.  ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ವೈಭವೀಕರಿಸಬಾರದು ಅಥವಾ ಭಯೋತ್ಪಾದಕರಿಗೆ ಆಶ್ರಯ ನೀಡಬಾರದು ಎಂದು ಸಾರ್ಕ್ ಸದಸ್ಯ ದೇಶಗಳಲ್ಲಿ ಮನವಿ ಮಾಡಿದ್ದಾರೆ.


ಒಂದು ದೇಶದ ಭಯೋತ್ಪಾದಕ ಬೇರೆಯಾರಿಗೂ ಹುತಾತ್ಮ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Sri Raghav

Admin