ಭಯೋತ್ಪಾದಕರಿಂದ ಯಾವುದೇ ದೇಶ ಅಣ್ವಸ್ತ್ರ ದಾಳಿಗೆ ಗುರಿಯಾಗಬಹುದು : ವಿಶ್ವಸಂಸ್ಥೆ ಕಳವಳ

Spread the love

Buclear-attack

ವಿಯೆನ್ನಾ, ಡಿ.6-ಅಣ್ವಸ್ತ್ರ ಭಯೋತ್ಪಾದಕರು ಯಾವುದೇ ದೇಶದ ಮೇಲೆ, ಎಲ್ಲಿ ಬೇಕಾದರೂ ಭಯಾನಕ ದಾಳಿ ನಡೆಸಬಹುದು ಎಂಬ ಆತಂಕವನ್ನು ವಿಶ್ವಸಂಸ್ಥೆಯ ಅಣು ಕಾವಲು ಸಮಿತಿ (ಯುಎನ್ ಆಟೊಮಿಕ್ ವಾಚ್‍ಡಾಗ್) ವ್ಯಕ್ತಪಡಿಸಿದೆ. ರೇಡಿಯೋ ವಿಕಿರಣ ವಸ್ತುಗಳ ದುರ್ಬಳಕೆ ಮತ್ತು ಸ್ಥಾವರಗಳ ಮೇಲೆ ಆಕ್ರಮಣ ತಡೆಗಟ್ಟುವ ಕುರಿತು ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ಆರಂಭವಾದ ಒಂದು ವಾರದ ಸಚಿವರ ಸಮಾವೇಶದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ) ಮುಖ್ಯಸ್ಥ ಯುಕಿಯಾ ಅಮಾನೋ, ಎಲ್ಲ ದೇಶಗಳಲ್ಲೂ ಪರಿಣಾಮಕಾರಿ ಪರಮಾಣು ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.

ಯಾವುದೇ ದೇಶವು ಅಣು ಅಥವಾ ಇತರ ರೇಡಿಯೋ ವಿಕಿರಣ ವಸ್ತುಗಳನ್ನು ಹೊಂದಿರಲಿ ಅಥವಾ ಹೊಂದಿಲ್ಲದೇ ಇರಲಿ, ಅದನ್ನು ಗಣನೆಗೆ ತೆಗೆದುಕೊಳ್ಳದೇ ತಮ್ಮ ಮುಖ್ಯ ಸ್ಥಾವರಗಳು ಮತ್ತು ನೆಲೆಗಳಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಅವರು ಸಲಹೆ ಮಾಡಿದರು.  ಭಯೋತ್ಪಾದಕರು ಮತ್ತು ಅಪರಾಧಿಗಳು ಜಾಗತಿಕ ಅಣು ಭದ್ರತೆ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳಲು ಅಥವಾ ಅವುಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಾರೆ. ಈ ಆಕ್ರಮಣಗಳು ಜಗತ್ತಿನ ಯಾವುದೇ ದೇಶ ಇಲ್ಲವೇ ಯಾವುದೇ ಭಾಗದಲ್ಲಿ ಬೇಕಾದರೂ ನಡೆಯಬಹುದು. ಇಂಥ ಸನ್ನಿವೇಶವನ್ನು ಗಂಭೀರವಾಗಿ ಪರಿಗಣಿಸಿ ರಕ್ಷಣಾ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin