ಭಯೋತ್ಪಾದನೆಗೆ ಯುವಕರ ಸೇರ್ಪಡೆಯಾಗುತ್ತಿರುವುದು ವಿಶ್ವದ ದೊಡ್ಡ ಸವಾಲು : ರಾಜನಾಥ್

rajnath-sigh

ಗುರ್‍ಗಾಂವ್, ಮಾ.15-ಭಯೋತ್ಪಾದನೆಗೆ ಯುವಕರು ಸೇರ್ಪಡೆಯಾಗುತ್ತಿರುವುದು ಪ್ರಸ್ತುತ ವಿಶ್ವವು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ. ಗುರುಗ್ರಾಮದಲ್ಲಿ ನಿನ್ನೆ ರಾತ್ರಿ ನಾಲ್ಕನೇ ಭಯೋತ್ಪಾದನೆ ನಿಗ್ರಹ ಸಮಾವೇಶದಲ್ಲಿ ಜಾಗತಿಕ ಭಯೋತ್ಪಾದನೆ ಬದಲಾಗುತ್ತಿರುವ ಬಾಹ್ಯರೇಖೆಗಳ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೇ ಆ ದೇಶದ ಭಯೋತ್ಪಾದನೆ ಕುಮ್ಮಕ್ಕುಗಳಿಗೆ ತರಾಟೆ ತೆಗೆದುಕೊಂಡರು.

ಕೆಲವು ದೇಶಗಳು ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುತ್ತಿವೆ ಹಾಗೂ ಉಗ್ರಗಾಮಿಗಳಿಗೆ ಸುರಕ್ಷಿತ ಸ್ವರ್ಗವನ್ನು ಕಲ್ಪಿಸಿಕೊಟ್ಟಿವೆ. ಇದರಿಂದಾಗಿ ಜಾಗತಿಕವಾಗಿ ಭಯೋತ್ಪಾದನೆ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದು ಗೃಹ ಸಚಿವರು ಕಟುವಾಗಿ ಟೀಕಿಸಿದರು. ವಿಶ್ವದ ಅನೇಕ ದೇಶಗಳು ಈ ಸಮಸ್ಯೆಯನ್ನು ಗುರುತಿಸಿ, ಭಯೋತ್ಪಾದನೆಯ ಮೂಲಭೂತ ವಾದವನ್ನು ನಿರ್ಮೂಲನೆ ಮಾಡಲು ಕ್ರಮಗಳನ್ನು ಕೈಗೊಂಡಿವೆ. ಈ ನಿಟ್ಟಿನಲ್ಲಿ ಭಾರತವು ಸಹ ಸಕಾಲದಲ್ಲಿ ಕ್ರಮ ಕೈಗೊಂಡಿದೆ. ನಮ್ಮ ನೆಲದ ಮೇಲೆ ದಾಳಿ ನಡೆಸಲು ಕುತಂತ್ರ ರೂಪಿಸಿದ್ದ ಭಯೋತ್ಪಾದಕರ ಜಾಲವನ್ನು ಮಟ್ಟ ಹಾಕಿದೆ ಎಂದು ಅವರು ಹೇಳಿದರು.

Sri Raghav

Admin