ಭಯೋತ್ಪಾದನೆ ಖಂಡಿಸಿದ ಗಾಯಕಿ ನಹೀದ್ ಅಫ್ರಿನ್‍ ವಿರುದ್ಧ ಮುಲ್ಲಾಗಳ ಫತ್ವಾ

Spread the love

Fatwa

ಗುವಾಹತಿ,ಮಾ.15-ಭಯೋತ್ಪಾದನೆ ವಿರುದ್ಧ ಹಾಡು ಹಾಡಿದ ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್‍ಗೆ ಅಸ್ಸಾಂನ 46 ಮುಲ್ಲಾಗಳು ಫತ್ವಾ (ಆದೇಶ) ಹೊರಡಿಸಿದ್ದಾರೆ. 2015ರ ಮ್ಯೂಸಿಕ್ ರಿಯಾಲಿಟಿ ಶೋನಲ್ಲಿ ವಿಜೇತಳಾಗಿ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸು ಕಾಣುತ್ತಿದ್ದ ಪ್ರತಿಭಾವಂತ ಗಾಯಕಿಗೆ ಈ ಫತ್ವಾದಿಂದ ಅಡ್ಡಿಯಾಗಿದೆ.   ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರೂ ಸೇರಿದಂತೆ ಭಯೋತ್ಪಾದನೆ ವಿರುದ್ಧ ಹಾಡು ಹಾಡಿದ್ದಕ್ಕಾಗಿ ಗಾಯಕಿ ವಿರುದ್ಧ ಫತ್ವಾ ಹೊರಡಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ವಲ್ಲಭ್ ಭಟ್ಟಾಚಾರ್ಯ ಹೇಳಿದ್ದಾರೆ.

ಸಾರ್ವಜನಿಕವಾಗಿ ಹಾಡು ಹಾಡುವುದನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಿರುವ ಕರಪತ್ರಗಳು ಮಧ್ಯ ಅಸ್ಸಾಂನ ಹಜೋಯ್ ಮತ್ತು ನಾಗಾಂವ್ ಜಿಲ್ಲೆಗಳಲ್ಲಿ ಕಂಡು ಬಂದಿದೆ. ಅಸ್ಸಾಮಿ ಭಾಷೆಯಲ್ಲಿರುವ ಈ ಕರಪತ್ರಗಳಲ್ಲಿ 46 ಮುಲ್ಲಾಗಳು ಮತ್ತು ಧಾರ್ಮಿಕ ಮುಖಂಡರ ಹೆಸರುಗಳಿವೆ. ಹಿಂದು ದೇವರನಾಮಗಳನ್ನು ಹಾಡಿದ್ದಕ್ಕೆ ಮುಸ್ಲಿಂ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿ ಪ್ರಾಣ ಬೆದರಿಕೆ ಆತಂಕಕ್ಕೂ ಒಳಗಾಗಿದ್ದ ಶಿವಮೊಗ್ಗದ ಪ್ರತಿಭಾನ್ವಿತ ಗಾಯಕಿ ಸುಹಾನಾ ಪ್ರಕರಣವನ್ನು ಇದು ನೆನಪಿಸುತ್ತದೆ.

[ ರಾಜ್ಯ ಬಜೆಟ್ 2017-18  (Live Updates) ]


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin