ಭಯೋತ್ಪಾದನೆ ವಿರುದ್ಧ ಏಕಾಂಗಿ ಹೋರಾಟ ಅಸಾಧ್ಯ: ಜಾನ್ ಕೆರ್ರಿ

John-Kerry

ನವದೆಹಲಿ,ಆ.31- ಭಯೋತ್ಪಾದನೆ ಮತ್ತು ಆತಂಕವಾದದ ವಿರುದ್ದ ಯಾವುದೇ ಒಂದು ದೇಶ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಹೇಳಿದ್ದಾರೆ.   ರಾಜಧಾನಿಯಲ್ಲಿ ಇಂದು ಬೆಳಗ್ಗೆ ಐಐಟಿ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದಕ್ಕೂ ಮುನ್ನ ಮಾತನಾಡಿದ ಅವರು, ಐಎಸ್ಐಎಸ್, ಡಯಿಶ್, ಅಲ್-ಕೈದಾ , ಎಲ್ಇಟಿ, ಜೆಇಎಂನಂಥ ಭಯೋತ್ಪಾದನೆ ಗುಂಪುಗಳ ವಿರುದ್ಧ ಯಾವುದೇ ಒಂದು ರಾಷ್ಟ್ರ ಏಕೈಕವಾಗಿ ಹೋರಾಡಲು ಸಾಧ್ಯವಾಗದು ಎಂದರು.
ಇಂಥ ಉಗ್ರಗಾಮಿ ಸಂಘಟನೆಗಳು ವಿಶ್ವಕ್ಕೆ ಅತಿದೊಡ್ಡ ಸವಾಲಾಗಿದೆ. ಇವುಗಳ ವಿರುದ್ಧ ಹೋರಾಡಲು ದೇಶಗಳ ನಡುವೆ ಸಹಕಾರ ಅಗತ್ಯ ಎಂದು ಅವರು ಸಲಹೆ ಮಾಡಿದರು.

ಭಯೋತ್ಪಾದಕರ ವಿರುದ್ದ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದ ಅವರು, ಮುಂಬೈ ಮತ್ತು ಪಠಾಣ್ಕೋಟ್ ದಾಳಿಗಳಿಗೆ ಕಾರಣರಾದವರನ್ನು ಕಾನೂನು ಶಿಕ್ಷೆಗೆ ಒಳಪಡಿಸಲು ಅಗತ್ಯವಾದ ಎಲ್ಲ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.   ನಂತರ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ನೀವು ಇಲ್ಲಿಗೆ ದೋಣಿಗಳಲ್ಲಿ ಬಂದಿರುವಿರಾ? ಎಂದು ದೆಹಲಿಯ ಭಾರೀ ಮಳೆಯನ್ನು ಪ್ರಸ್ತಾಪಿಸಿ ಹಾಸ್ಯ ಚಟಾಕಿ ಹಾರಿಸಿದರು.  ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಜಾತಿಮತ ಪಂಥಗಳ ಭೇದ-ಭಾವಿಲ್ಲದೆ ಎಲ್ಲ ಜನರ ಹಕ್ಕುಗಳನ್ನು ಗೌರವಿಸಬೇಕು, ಜೈಲಿಗೆ ತಳ್ಳುತ್ತಾರೆ ಎಂಬ ಭೀತಿ ಇಲ್ಲದೆ ತಮ್ಮ ಹಕ್ಕುಗಳಿಗೆ ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು.

► Follow us on –  Facebook / Twitter  / Google+

Sri Raghav

Admin