ಭಾರತಕ್ಕೆ ಅಣ್ವಸ್ತ್ರ ಆತಂಕವಿರುವುದು ಭಯೋತ್ಪಾದಕರಿಂದಲ್ಲ ಪಾಕ್ ಸೇನೆಯಿಂದ : ಶಿವಶಂಕರ್ ಮೆನನ್

Menon-01

ವಾಷಿಂಗ್ಟನ್, ಅ.13- ಪಾಕಿಸ್ತಾನದ ಅಣ್ವಸ್ತ್ರಗಳಿಗೆ ನಿಜವಾದ ಆತಂಕ ಇರುವುದು ಭಯೋತ್ಪಾದಕರಿಂದ ಅಲ್ಲ; ಬದಲಿಗೆ ಅವರ ಸೇನೆಯಲ್ಲೇ ಇರುವ ದುಷ್ಟ ಶಕ್ತಿಗಳಿಂದ ಎಂದು ಭಾರತದ ಮಾಜಿ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿರುವ ಅಪಾಯಕಾರಿ ಪರಮಾಣು ಅಸ್ತ್ರಗಳು ಭಯೋತ್ಪಾದಕರಿಗೆ ಸುಲಭವಾಗಿ ಮತ್ತು ಅಗ್ಗವಾಗಿ ಲಭಿಸುವ ಮಾರ್ಗಗಳಿಲ್ಲ. ಅಣ್ವಸ್ತ್ರಗಳು ಸಂಕೀರ್ಣ ಸಾಧನೆಗಳಾಗಿದ್ದು, ಅದರ ನಿರ್ವಹಣೆ, ಬಳಕೆ ಮತ್ತು ಪೂರೈಕೆಗೆ ಅತ್ಯುನ್ನತ ಮಟ್ಟದ ನಿಪುಣತೆ ಅಗತ್ಯವಿರುತ್ತದೆ ಎಂದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ನನಗೆ ತಿಳಿದಿರುವಂತೆ ಪಾಕಿಸ್ತಾನದ ಅಣ್ವಸ್ತ್ರಗಳಿಗೆ ನಿಜವಾದ ಆತಂಕ ಇರುವುದು ಸೇನೆ ಒಳಗಿನಿಂದಲೇ. ಆದೇಶದೊಂದಿಗೆ ಅಥವಾ ಆದೇಶ ರಹಿತವಾಗಿ ನ್ಯೂಕ್ಲಿಯರ್ ಜಿಹಾದ್‍ಗೆ (ಅಣ್ವಸ್ತ್ರ ಧರ್ಮಯುದ್ಧ) ನಿರ್ಧರಿಸುವ ಪಾಕಿಸ್ತಾನದ ಓರ್ವ ಪೈಲೆಟ್ ಅಥವಾ ಓರ್ವ ಬ್ರಿಗೇಡಿಯರ್‍ನಿಂದ ಈ ಆತಂಕ ಎದುರಾಗಬಹುದು ಎಂದು ಮೆನನ್ ತಮ್ಮ ಚಾಯ್ಸಸ್ ಇನ್ ಸೈಡ್ ದಿ ಮೇಕಿಂಗ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ ಪುಸ್ತಕದಲ್ಲಿ ಬರೆದಿದ್ದಾರೆ.

► Follow us on –  Facebook / Twitter  / Google+

Sri Raghav

Admin