ಭಾರತದಲ್ಲಿ ಸರಾಸರಿಗಿಂತ ಕಡಿಮೆ ಮುಂಗಾರು ಮಳೆ

Rain--012

ನವದೆಹಲಿ, ಅ.1-ಭಾರತದ ವಾರ್ಷಿಕ ಮುಂಗಾರು ಹಂಗಾಮಿನಲ್ಲಿ ಮಳೆಯ ಪ್ರಮಾಣವು ಸರಾಸರಿಗಿಂತ ಕೆಳಮಟ್ಟದಲ್ಲಿ ದಾಖಲಾಗಿದೆ ಹಾಗೂ ಮುನ್ಸೂಚನೆಗಿಂತ ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಪರಿಣಿತರು ಹೇಳಿದ್ದಾರೆ ವರ್ಷ ಋತು ಶನಿವಾರ ಅಂತ್ಯಗೊಂಡಿದ್ದು, ದೇಶದ ಒಟ್ಟಾರೆ ಮುಂಗಾರು ಮಾಹಿತಿಯನ್ನು ನೀಡಲಾಗಿದೆ.  ಭಾರತದ ಅನೇಕ ರಾಜ್ಯಗಳಲ್ಲಿ ಭಾರೀ ಮತ್ತು ನೆರೆ ಹಾವಳಿ ಸಂಭವಿಸಿದ್ದರೂ, ಕೇಂದ್ರ ಮತ್ತು ಉತ್ತರ ರಾಜ್ಯಗಳಲ್ಲಿ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿದೆ ಎಂದು ಹಮಾಮಾನ ತಜ್ಞರು ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಮುಂಗಾರು ಹಂಗಾಮಿನಲ್ಲಿ ಶೇ.98ರಷ್ಟು ಮಳೆಯಾಗುತ್ತದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ ಶೇ.95 ಮಳೆಯಾಗಿದೆ. ಇದು ಮಳೆ ಪ್ರಮಾಣದ ಬಗ್ಗೆ ಇಲಾಖೆ ನೀಡಿದ್ದ ಮುನ್ಸೂಚನೆ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿರುವುದು ಇದು ನಾಲ್ಕನೇ ಬಾರಿ.  ಭಾರತದ ವಾರ್ಷಿಕ ವರ್ಷಧಾರೆಯಲ್ಲಿ ಮುಂಗಾರು ಮಳೆ ಕೊಡುಗೆ ಶೇ.70ರಷ್ಟು. ಇದು ಭಾರತದ 2 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಶೇ.15ರಷ್ಟು ಪಾಲು ನೀಡುವ ಕೃಷಿ ಕ್ಷೇತ್ರಕ್ಕೆ ತೀರಾ ಅನಿವಾರ್ಯ. 1.3 ಶತಕೋಟಿ ಜನಸಂಖ್ಯೆ ಹೊಂದಿರುವ ದೇಶದ ಅರ್ಧಕ್ಕಿಂತ ಹೆಚ್ಚು ಮಂದಿ ವ್ಯವಸಾಯ ಚಟುವಟಿಕೆಗಳಿಗೆ ಮುಂಗಾರು ಮಳೆಯನ್ನೇ ಅವಲಂಬಿಸಿದ್ದಾರೆ.

ಎಣ್ಣೆ ಬೀಜಗಳು ಮತ್ತು ಧಾನ್ಯಗಳನ್ನು ಬೆಳೆಯುವ ಮಧ್ಯಪ್ರದೇಶ ಹಾಗೂ ಭತ್ತ ಬೇಸಾಯ ಮಾಡುವ ಹರಿಯಾಣ ಮತ್ತು ಪಂಜಾಬ್‍ನಲ್ಲಿ ಕಡಿಮೆ ಮಳೆಯಾಗಿದೆ.
ಉತ್ತರ ಭಾಗದ ಭತ್ತ ಇಳುವರಿಯಲ್ಲಿ ಈ ವರ್ಷ ಶೇ.2ರಷ್ಟು ಕೊರತೆ ಉಂಟಾಗುವ ಸಾಧ್ಯತೆ ಇದೆ. ಕಳೆದ ವರ್ಷ ಉತ್ತಮ ನೀರಾವರಿಯಿಂದಾಗಿ ಮಳೆ ಅಭಾವ ಪ್ರದೇಶದಲ್ಲಿ ಭತ್ತ ಫಸಲು ಸಮೃದ್ಧವಾಗಿತ್ತು. ಈ ಬಾರಿ ಸೋಯಾಬೀನ್ ಬೆಳೆ ಇಳುವರಿಯಲ್ಲೂ ಶೇ.8ರಷ್ಟು ಕುಗ್ಗಿದೆ.

Sri Raghav

Admin