ಭಾರತದಲ್ಲಿ 2020ರ ವೇಳೆಗೆ ಕ್ಯಾನ್ಸರ್ಗೆ ಬಲಿಯಾಗಲಿದ್ದಾರಂತೆ 8.8 ಲಕ್ಷ ಮಂದಿ..!
ನವದೆಹಲಿ, ಫೆ.5-ಮುಂದಿನ 20 ವರ್ಷಗಳಲ್ಲಿ ಮಹಿಳೆಯರು ಮಾರಕ ಕ್ಯಾನ್ಸರ್ಗೆ ಒಳಗಾಗುವ ಗಂಡಾಂತರ ಆರು ಪಟ್ಟು ಹೆಚ್ಚಾಗಲಿದೆ ಎಂಬ ಆತಂಕಕಾರಿ ಸಂಗತಿಯನ್ನು ಬ್ರಿಟನ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಬಹಿರಂಗಗೊಳಿಸಿದೆ. ಭಾರತದಲ್ಲಿ 2020ರ ವೇಳೆ 17.3 ಲಕ್ಷ ಮಂದಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಹಾಗೂ 8.8 ಲಕ್ಷ ಮಂದಿ ಕ್ಯಾನ್ಸರ್ನಿಂದ ಸಾವಿಗೀಡಾಗುವ ಸಾಧ್ಯತೆ ಇದೆ. ಬೊಜ್ಜು ಮತ್ತು ಸ್ಥೂಲಕಾಯವೇ ಇದಕ್ಕೆ ಮುಖ್ಯ ಕಾರಣ. ಬಹಳಷ್ಟು ಮಹಿಳೆಯರು ಬೊಜ್ಜು ಸಂಬಂಧಿ ಕ್ಯಾನ್ಸರ್ಗಳಿಗೆ ತುತ್ತಾಗುತ್ತಿದ್ದಾರೆ. ಈ ಪ್ರಮಾಣ ಮುಂದಿನ ಎರಡು ದಶಕಗಳಲ್ಲಿ ಆರು ಪಟ್ಟು ಹೆಚ್ಚಾಗಲಿದೆ. ಧೂಮಪಾನ ಮಾಡುವ ಮಹಿಳೆಯರಲ್ಲೂ ಕ್ಯಾನ್ಸರ್ ಸಾಧ್ಯತೆ ತೀವ್ರ ಪ್ರಮಾಣದಲ್ಲಿ ವೃದ್ದಿಯಾಗಲಿದೆ ಎಂದು ಅಧ್ಯಯನ ಹೇಳಿದೆ.
ಸ್ತನ ಕ್ಯಾನ್ಸರ್ ಜೊತೆಗೆ, ಅಂಡಾಶಯ, ಗರ್ಭಕೊರಳು, ಮತ್ತು ಬಾಯಿ ಕ್ಯಾನ್ಸರ್ನಂಥವು ಅತ್ಯಧಿಕವಾಗುವ ಸಾಧ್ಯತೆ ಇದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ವಿವರಿಸಲಾಗಿದೆ. ಸಾವಿಗೆ ಐದು ಪ್ರಮುಖ ಕಾರಣಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಜೀವನಶೈಲಿ ಮತ್ತು ಆಹಾರ ಪದ್ದತಿ, ಮಿತಿ ಮೀರಿದ ದೇಹ ತೂಕ, ಹಣ್ಣು ಮತ್ತು ತರಕಾರಿಗಳ ಕಡಿಮೆ ಸೇವನೆ, ವ್ಯಾಯಾಮ ಕೊರತೆ, ಧೂಮಪಾನ ಮತ್ತು ಮದ್ಯಪಾನ ಸೇವನೆ ಇದಕ್ಕೆ ಮುಖ್ಯ ಕಾರಣ ಎಂದು ತಿಳಿಸಲಾಗಿದೆ.
ಫೆ.4 ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ವಿಶ್ವ ಆರೋಗ್ಯ ಸಂಸ್ಥೆ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ವಿಶ್ವದಲ್ಲಿ 88 ಲಕ್ಷ ಕ್ಯಾನ್ಸರ್ ಸಾವು ಪ್ರಕರಣಗಳು ದಾಖಲಾಗುತ್ತಿವೆ. ಭಾರತದಲ್ಲಿ 2020ರ ವೇಳೆ 17.3 ಲಕ್ಷ ಮಂದಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಾರೆ ಹಾಗೂ 8.8 ಲಕ್ಷ ಮಂದಿ ಕ್ಯಾನ್ಸರ್ನಿಂದ ಸಾವಿಗೀಡಾಗುವ ಸಾಧ್ಯತೆ ಇದೆ. ವಿಶ್ವದಲ್ಲಿ ಸಂಭವಿಸುವ ಪ್ರತಿ ಆರು ಸಾವುಗಳಲ್ಲಿ ಒಂದು ಕ್ಯಾನ್ಸರ್ನಿಂದಾಗಿರುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >