ಭಾರತದೊಂದಿಗೆ ಸದೃಢ ರಕ್ಷಣಾ, ದ್ವಿಪಕ್ಷೀಯ ಸಂಬಂಧಕ್ಕೆ ಅಮೆರಿಕ ಒಲವು

America--01

ವಾಷಿಂಗ್ಟನ್, ಅ.28- ಭಾರತದೊಂದಿಗೆ ಸುಭದ್ರಮಿಲಿಟರಿ ಸಂಬಂಧ ಮತ್ತು ದ್ವಿಪಕ್ಷೀಯ ವ್ಯಾಪಾರ ಸಂಬಂಧ ವಿಸ್ತರಿಸಲು ಅಮೆರಿಕ ಒಲವು ವ್ಯಕ್ತಪಡಿಸಿದೆ. ಇದರೊಂದಿಗೆ ಭಾರತಕ್ಕೆ ಎಫ್-16 ಮತ್ತು ಎಫ್-18 ಯುದ್ಧವಿಮಾನಗಳ ಮಾರಾಟಕ್ಕೆ ಹಾದಿ ಸುಗಮವಾಗಲಿದ್ದು, ರಕ್ಷಣಾ ತಂತ್ರಜ್ಞಾನ ಸಹಭಾಗಿತ್ದ ಸೃಷ್ಟಿಸಲು ಸಹ ನೆರವಾಗಲಿದೆ.

ಭಾರತದ ಜೊತೆ ಚಲನಶೀಲ ಸಂಬಂಧ ಇನ್ನೂ ದೊಡ್ಡ ಮಟ್ಟದಲ್ಲಿ ಬಲಗೊಳ್ಳಬೇಕಿದೆ. ನವದೆಹಲಿಯೊಂದಿಗೆ ರಕ್ಷಣಾ ಮತ್ತು ವಾಣಿಜ್ಯ ಬಾಂಧವ್ಯ ವರ್ಧನೆಯನ್ನು ವಾಷಿಂಗ್ಟನ್ ಸದಾ ಎದುರು ನೋಡುತ್ತದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕ ಅಲೈಸ್ ಜಿ. ವೆಲ್ಸ್ ತಿಳಿಸಿದ್ದಾರೆ.
ಅಲೈಸ್ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳಿಗೆ ಉಸ್ತುವಾರಿ ಸಹಾಯಕ ಕಾರ್ಯದರ್ಶಿ ಹಾಗೂ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಹಂಗಾಮಿ ವಿಶೇಷ ಪ್ರತಿನಿಧಿಯಾಗಿದ್ದಾರೆ. ಭಾರತ ಸೇರಿದಂತೆ ಏಷ್ಯಾ ದೇಶಗಳಿಗೆ ಅಮೆರಿಕ ರಕ್ಷಣಾ ಸಚಿವ ಟೆಲ್ಲರ್‍ಸನ್ ಭೇಟಿ ವೇಳೆ ಅಲೈಸ್ ಸಹ ಇವರ ಜೊತೆಗಿದ್ದರು.

Sri Raghav

Admin