ಭಾರತದ ಮೇಲೆ ಉಗ್ರರಿಂದ ಮುಂಬೈ 26/11 ಮಾದರಿ ದಾಳಿ ಸಾಧ್ಯತೆ

terror

ನವದೆಹಲಿ, ಏ.11-ಪಾಕಿಸ್ತಾನ ಮೂಲದ ಭಯೋತ್ಪಾದಕರಿಂದ ಭಾರತದ ಮೇಲೆ 26/11ರ ಮುಂಬೈ ದಾಳಿ ಶೈಲಿಯ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಬೆಲ್ಜಿಯಂನ ಬ್ರುಸ್ಸೆಲ್ಸ್ ಮೂಲದ ಚಿಂತಕರ ಚಾವಡಿಯಾದ ಇಂಟರ್‍ನ್ಯಾಷನಲ್ ಕ್ರೈಸಿಸ್ ಗ್ರೂಪ್ ಎಚ್ಚರಿಕೆ ನೀಡಿದೆ. ಮುಂಬೈನಲ್ಲಿ ಉಗ್ರರು ನಡೆಸಿದ ಭಯಾನಕ ದಾಳಿ ಮಾದರಿಯಲ್ಲೇ ಮತ್ತೆ ಆಕ್ರಮ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಈ ರೀತಿಯ ದಾಳಿ ನಡೆದರೆ ಭಾರತ-ಪಾಕ್ ಸಂಬಂಧ ಮತ್ತಷ್ಟು ಹಳಸಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಪೋಷಣೆಯಲ್ಲಿರುವ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಮತ್ತು ಜೈಷ್-ಎ-ಮಹಮದ್ (ಜೆಇಎಂ) ಈ ಎರಡು ಭಾರತ-ವಿರೋಧಿ ಉಗ್ರಗಾಮಿ ಬಣಗಳು ಭಾರತದ ಮೇಲೆ ಸಮಯ ಸಾಧಿಸಿ ದಾಳಿ ನಡೆಸುವ ಬಗ್ಗೆ ಮಾಹಿತಿ ಇದೆ ಎಂದು ಅದು ಹೇಳಿದೆ.   ಪಾಕ್ ಕೃಪಾಪೋಷಿತ ಭಯೋತ್ಪಾದನೆ ಬಣಗಳು ಒಡ್ಡುತ್ತಿರುವ ಆತಂಕ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕಾಗೂ ಇದರಿಂದ ಕಂಟಕ ಇದೆ ಎಂದು ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆ ಕುರಿತು ಅಮೆರಿಕ ಹೊಂದಿರುವ ನೀತಿಗಳನ್ನು ವಿಶ್ಲೇಷಿಸಲಾಗಿದೆ.

ಇವೆರಡೂ ಉಗ್ರಗಾಮಿ ಬಣಗಳು ಅಲ್-ಕೈದಾ ಜೊತೆ ನಿಕಟ ಸಂಪರ್ಕ ಹೊಂದಿಲ್ಲವಾದರೂ, ಎಲ್‍ಇಟಿ ಮತ್ತು ಜೆಇಎಂ ಉಗ್ರರು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಇತರ ಭಯೋತ್ಪಾದಕರು ಮತ್ತು ಜಿಹಾದಿಗಳ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದ ಮೇಲೆ ಮತ್ತೊಮ್ಮೆ ದಾಳಿ ನಡೆದರೆ ಅದರಿಂದ ಅಮೆರಿಕಕ್ಕೂ ಆತಂಕ ಎದುರಾಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.   ಕೌಂಟರ್ ಟೆರ್ರರಿಸಂ ಪಿಟ್‍ಫಾಲ್ಸ್ : ವಾಟ್ ದಿ ಯುಎಸ್ ಫೈಟ್ ಅಗೆನೆಸ್ಟ್ ಐಎಸ್‍ಐಎಸ್ ಅಂಡ್ ಅಲ್-ಕೈದಾ ಷುಡ್ ಅವಾಯ್ಡ್ ಎಂಬ ಶೀರ್ಷಿಕೆಯಲ್ಲಿ ಈ ಬಗ್ಗೆ ಎಚ್ಚರಿಕೆಯ ಸಂಗತಿಗಳನ್ನು ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin