ಭಾರತದ 23 ಬೆಸ್ತರನ್ನು ಸೆರೆ ಹಿಡಿದ ಪಾಕ್
ಅಹಮದಾಬಾದ್, ಏ.27-ಗುಜರಾತ್ ಕರಾವಳಿ ಪ್ರದೇಶದ ಬಳಿ ಭಾರತದ 23 ಮೀನುಗಾರರನ್ನು ಪಾಕಿಸ್ತಾನ ಕಡಲ ರಕ್ಷಣಾ ಪಡೆ ಸೆರೆಹಿಡಿದು ನಾಲ್ಕು ದೋಣಿಗಳನ್ನು ವಶಪಡಿಸಿಕೊಂಡಿದೆ. ಗುಜರಾತ್ನ ಪೋರಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 23 ಬೆಸ್ತರನ್ನು ಅಂತಾರಾಷ್ಟ್ರೀಯ ಕಡಲ ಗಡಿ ರೇಖೆಯ (ಐಎಂಬಿಎಲ್) ಜಕಾವು ಬಳಿ ಪಾಕಿಸ್ತಾನ್ ಮಾರಿಟೈಮ್ ಸೆಕ್ಯೂರಿಟಿ ಏಜೆನ್ಸಿ (ಪಿಎಂಎಸ್ಎ) ಬಂಧಿಸಿದೆ. ಅಲ್ಲದೇ ಅವರ ನಾಲ್ಕು ಬೋಟ್ಗಳನ್ನು ಸಹ ಜಫ್ತಿ ಮಾಡಿದೆ ಎಂದು ಪೋರಬಂದರ್ ಮೂಲದ ನ್ಯಾಷನಲ್ ಫಿಶ್ವರ್ಕರ್ಸ್ ಪೋರಂನ ಅಧಿಕಾರಿ ಮನೀಷ್ ಲೋಧಾರಿ ಹೇಳಿದ್ದಾರೆ.
ಬಂಧಿತ ಬೆಸ್ತರನ್ನು ಪಾಕಿಸ್ತಾನದ ಬಂದರು ನಗರಿ ಕರಾಚಿಗೆ ಕರೆದೊಯ್ಯಲಾಗಿದೆ. ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸುವ ಬಗ್ಗೆ ಪ್ರಯತ್ನಗಳು ಮುಂದುವರಿದಿವೆ.
< Eesanje News 24/7 ನ್ಯೂಸ್ ಆ್ಯಪ್ >