ಭಾರತದ 30 ಯೋಧರನ್ನು ಹತ್ಯೆ ಮಾಡಲಾಗಿದೆ ಎಂಬ ಉಗ್ರ ಹಫೀಜ್ ಹೇಳಿಕೆ ತಳ್ಳಿ ಹಾಕಿದ ಸೇನೆ

Hafeez-Syeed

ನವದೆಹಲಿ, ಜ14-ಜಮ್ಮು-ಕಾಶ್ಮೀರದ ಅಕ್ನೂರ್‍ನಲ್ಲಿ ಉಗ್ರರು ನಡೆದ ಭೀಕರ ದಾಳಿಯಲ್ಲಿ ಭಾರತದ ಮೂವರು ಯೋಧರು ಹತರಾಗಿರುವುದಾಗಿ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಹೇಳಿಕೆಯನ್ನು ಸೇನೆ ತಳ್ಳಿ ಹಾಕಿದೆ. ಉಗ್ರರಿಂದ ಇಂಥ ಯಾವುದೇ ದಾಳಿ ನಡೆದಿಲ್ಲ. ಈ ಹೇಳಿಕೆ ಶುದ್ಧ ಸುಳ್ಳು ಎಂದು ಸೇನೆಯ ಉನ್ನತಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ಮ ುಜ ಾಫರ್‍ಬಾದ್‍ನಲ್ಲಿ ಮಾತನಾಡಿದ್ದ ಸಯೀದ್, ನಮ್ಮ ಸಂಘಟನೆಯ ನಾಲ್ವರು ಯುವಕರು ಜಮ್ಮುವಿನ ಅಕ್ನೂರ್ ಸೇನಾ ಶಿಬಿರಕ್ಕೆ ನುಗ್ಗಿ ಹತ್ಯೆ ನಡೆಸಿದ್ದಾರೆ. 30ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಾರೆ ಎಂದು ವಾದಿಸಿದ್ದ.

ಆದರೆ ಅಕ್ನೂರ್‍ನಲ್ಲಿ ಉಗ್ರರು ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್(ಜಿಆರ್‍ಇಎಫ್) ಶಿಬಿರದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವರು ಕಾರ್ಮಿಕರು ಗುಂಡಿಗೆ ಬಲಿಯಾಗಿದ್ದಾರೆ. ಅದನ್ನು ಹೊರತುಪಡಿಸಿದರೆ ಬೇರೆ ಯಾವುದೇ ದಾಳಿ ನಡೆದಿಲ್ಲ. ಮತ್ತೆ ಉಗ್ರರ ಅಟ್ಟಹಾಸಕ್ಕೆ ಅಸ್ಪದ ನೀಡುವುದೂ ಇಲ್ಲ ಎಂದು ಉನ್ನತಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin