ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ

Cricvket

ರಾಂಚಿ.ಮಾ.21. ಇಲ್ಲಿನ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟೇಲಿಯಾ ನಡುವೆ ಮುಕ್ತಾಯವಾದ ಬಾರ್ಡರ್ ಗವಸ್ಕಾರ್ ಟೆಸ್ಟ್ ಸರಣಿ ಮೂರನೇ ಪಂದ್ಯದಲ್ಲಿ ಕೊಹ್ಲಿ ಬಳಗ ಡ್ರಾಕ್ಕೆ ತೃಪ್ತಿಪಟ್ಟಿತು. ಇನಿಂಗ್ಸ್ ಹಿನ್ನಡೆ ಸಾಧಿಸಿ 2ನೇ ಇನಿಂಗ್ಸ್‍ನಲ್ಲಿ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆಟ ಮುಂದುವರಿಸಿದ ಆಸೀಸ್ ದಿನದ ಮೊದಲ ಆವಧಿಯಲ್ಲೇ ನಾಯಕ ಸ್ಟೀವ್ ಸ್ಮೀತ್ (21) ಮತ್ತು ಮ್ಯಾಟ್ ರೆನ್‍ಶಾ (15) ಅವರ ವಿಕೆಟ್ ಪತವವಾಗಿ ಸೋಲಿನ ಭೀತಿ ಎದುರಿತ್ತಿತ್ತು. ಈ ಹಂತದಲ್ಲಿ ಶಾನ್ ಮಾರ್ಷ್ (53) ಮತ್ತು ಪೀಟರ್ ಹ್ಯಾಂಡ್ಸ್‍ಕಂಬ್ (72) 5ನೇ ವಿಕೆಟ್ ಜೊತೆಯಾಟದಲ್ಲಿ 124 ರನ್‍ಗಳ ತಾಳ್ಮೆ ಆಟದಿಂದ ಆಸೀಸ್ ಡ್ರಾ ಸಾಧಿಸಲು ನೆರವಾದರು.

ಈ ಜೋಡಿಯೂ ನಿಧನ ಆಟಕ್ಕೆ ಮೊರೆಹೋಗಿ ಬಾರತ ಬೌಲರಗಳನ್ನು ಎದರಿಸಿವಲ್ಲಿ ಸಫಲರಾದರು. 153 ರನ್‍ಗಳ ಹಿನ್ನಡೆ ಆನಭವಿಸಿ 2ನೇ ಇನಿಂಗ್ಸ್ ಆರಂಭಿಸಿದ ಆಸೀಸ್ 63 ರನ್‍ಗಳ ಆಗುವಷ್ಟರಲ್ಲೇ 4 ವಿಕೆಟ್ ಕಳೆದುಕೊಂಡಿತು. ಇದರಿಂದ ಭಾರತ ತಂಡ ಜಯ ಸಾಧಿಸ ಬಹುದು ಎಂಬ ಲೆಕ್ಕಚಾರವಿತ್ತು. ಪ್ರವಾಸಿಗರು ಎಚ್ಚರಿಕೆ ಆಟವಾಡಿ ಡ್ರಾ ಸಾಧಿಸಿತು. ಅಂತಿಮವಾಗಿ ಆಸೀಸ್ 100 ಓವರ್‍ಗಳಲ್ಲಿ 6 ವಿಕೆಟ್‍ಗೆ 204 ರನ್ ಕಲೆ ಹಾಕಿತ್ತು. ಈ ಟೆಸ್ಟ್ ನಲ್ಲಿ ಅದ್ಭುತ ದ್ವಿಶತಕ ಸಾಧನೆ ಮಾಡಿದ ಚೇತೇಶ್ವರ್ ಪುಜಾರ ಪಂದ್ಯ ಪರುಷೋತ್ತಮ ಪ್ರಶಸ್ತಿ ಪಡೆದರು.

ಈಗಾಗಲೇ ಉಭಯ ತಂಡಗಳು 1-1 ಸಮಬಲ ಸಾಧಿಸಿದೆ. ಮುಂದಿನ ಅಥವಾ ಕೊನೆಯ ಪಂದ್ಯ ಮಾರ್ಚ್ 25 ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂತಿಮ ಪಂದ್ಯವು ತೀವ್ರ ಕೂತುಹಲ ಮೂಡಿಸಿದೆ.

ಆಸೀಸ್ ಮೊದಲ ಇನಿಂಗ್ಸ್ 10/451
ಭಾರತ ಮೊದಲ ಇನಿಂಗ್ಸ್ 9/603
ಆಸೀಸ್ 2ನೇ ಇನಿಂಗ್ಸ್ 6/204

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin