ಭಾರತಕ್ಕೆ ಹೀನಾಯ ಸೋಲು, ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕ್
ಲಂಡನ್. ಜೂ.18 : ಇಲ್ಲಿ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕ್ ಭಾರತವನ್ನು ಮಣಿಸಿ ಚೊಚ್ಚಲ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿತು. ಭಾರಿ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದಿದ್ದ ಪಾಕ್ 4 ವಿಕೆಟ್ ನಷ್ಟಕ್ಕೆ 338 ರನ್ ಗಳಿಸಿ ಭಾರತಕ್ಕ 339 ರನ್ ಗಳ ಬೃಹತ್ ಮೊತ್ತದ ಟಾರ್ಗೆಟ್ ನೀಡಿತ್ತು. ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮೊದಲ ಪಂದ್ಯದಲ್ಲೇ ಫಖರ್ ಝಮಾನ್ ಶತಕ ಸಿಡಿಸಿ ಸಂಭ್ರಮಿಸಿದರು. ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೆಚ್ಚು ರನ್ ಗಳಿಸಲು ಫಖರ್ ಝಮಾನ್ 106 ಎಸೆತಗಳಲ್ಲಿ 114 ರನ್ ಗಳಿಸಿದ್ದು ನೆರವಾಯಿತು.
ಬೃಹತ್ ಮೊತ್ತ ಬೆನ್ನಟ್ಟಿದ ಭಾರತ ಆರಂಭದಲ್ಲೇ ಆಘಾತವನ್ನನುಭವಿಸಿತು. ಪ್ರಮುಖ ಬ್ಯಾಟ್ಸ್ ಮ್ಯಾನ್ ಗಳಾದ ರೋಹಿತ್(0), ಕೊಹ್ಲಿ(5), ಧವನ್(21) ಔಟಾಗುವ ಮೂಲಕ ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು. ನಂತರ ಬಂದ ಧೋನಿ, ಯುವರಾಜ್ ಕೂಡ ನಿರಾಸೆ ಮೂಡಿಸಿ ಪೆವಿಲಿಯನ್ ನತ್ತ ತೆರಳಿದರು. ಹಾರ್ದಿಕ್ ಪಾಂಡ್ಯ ಸಿಕ್ಸ್ ಗಳ ಸುರಿಮಳೆ ಸುರಿಸಿ ಕೇವಲ 43 ಎಸೆತಗಳಲ್ಲಿ 76 ರನ್ ಗಳಿಸುವ ಮೂಲಕ ಭಾರತದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆದರೆ, ಇಲ್ಲದ ರನ್ ಕದಿಯಲು ಹೋಗಿ ಪಾಂಡ್ಯ ಕೂಡ ರನ್ ಔಟ್ ಆಗುವ ಮೂಲಕ ಭಾರತ ಸೋಲಿನ ಕದ ತಟ್ಟಿತು.
ಭಾರತದ ಬ್ಯಾಟ್ಸ್ ಮನ್ ಗಳ ಹೀನಾಯ ಪ್ರದರ್ಶನ ಮತ್ತು ಬೌಲರ್ ಗಳ ವೈಫಲ್ಯ ಭಾರತದ ಸೋಲಿಗೆ ಕಾರಣವಾಯಿತು. ಅಂತಿಮವಾಗಿ 30 ಓವರ್ ಗಳಲ್ಲಿ 158 ರನ್ ಗಳಿಸಿ ಆಲೌಟ್ ಆಗುವ ಮೂಲಕ ಕೋಟ್ಯಂತರ ಭಾರತೀಯರಲ್ಲಿ ಗೆಲುವಿನ ಆಸೆ ಆಸೆಯಾಗಿಯೇ ಉಳಿಯಿತು. ಅದರಲ್ಲೂ ಪಾಕ್ ವಿರುದ್ಧ ಹೀನಾಯವಾಗಿ ಸೋತ ಭಾರತದ ಆಟಗಾರರ ವಿರುದ್ಧ ಅಸಮಾಧಾನವನ್ನು ಮನಸ್ಸಿನೊಳಗೆ ಬಚ್ಚಿಟ್ಟುಕೊಂಡು, ನಿಸ್ಸಹಾಯಕರಂತೆ ಸೋಲೊಪ್ಪಿಕೊಳ್ಳಬೇಕಾಯಿತು.
ಸ್ಕೋರ್ :
ಭಾರತ : 158-all out (30.3 ov)
ಪಾಕಿಸ್ತಾನ : 338/4 (50.0 ov)
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS