ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಭೂಕಂಪ

Earthquake-01

ಇಂಫಾಲ್, ಮಾ.4- ಈಶಾನ್ಯ ರಾಜ್ಯ ಮಣಿಪುರದ ಭಾರತ-ಮ್ಯಾನ್ಮಾರ್ ಗಡಿ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ 7.42ರಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಸಾಧಾರಣ ಭೂಕಂಪನದಿಂದ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಮಣಿಪುರದ ಚಾಂದೆಲ್ ಜಿಲ್ಲೆಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಪಪುವಾ ನ್ಯೂ

ಗಿನಿಯಲ್ಲೂ ಭೂಕಂಪ:

ಸಿಡಿ ವರದಿ: ಪಪುವಾ ನ್ಯೂ ಗಿನಿ ಪ್ರದೇಶದಲ್ಲಿ 6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾ ಇಲಾಖೆ(ಯುಎಸ್‍ಜಿಎಸ್) ತಿಳಿಸಿದೆ. ಭೂಕಂಪದಿಂದ ಸಾವು- ನೋವಿನ ವರದಿಗಳಿಲ್ಲ ಮತ್ತು ಸುನಾಮಿ ಆತಂಕವಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin