ಭಾರತ-ಮ್ಯಾನ್ಮಾರ್ ಗಡಿ ಮೂಲಕ 7,000 ಕೆ.ಜಿ.ಚಿನ್ನ ಕಳ್ಳ ಸಾಗಣೆ

gold

ನವದೆಹಲಿ, ಸೆ.20– ಭಾರತ-ಮ್ಯಾನ್ಮಾರ್ ಗಡಿ ಮೂಲಕ ಮಣಿಪುರ ಮಾರ್ಗವಾಗಿ ಕಳೆದ ಎರಡೂವರೆ ವರ್ಷಗಳಲ್ಲಿ 7000 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಲಾಗಿದೆ. ಕಂದಾಯ ವಿಚಕ್ಷಣ ಇಲಾಖೆ ಸಿಬ್ಬಂದಿ ಚಿನ್ನ ಕಳ್ಳ ಸಾಗಣೆಯ ಭಾರೀ ಜಾಲವನ್ನು ಭೇದಿಸಿದ್ದು, ಮ್ಯಾನ್ಮಾರ್‍ನಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಪ್ರಕರಣಗಳಲ್ಲಿ ಹಲವರನ್ನು ಬಂಧಿಸಿದ್ದಾರೆ. ಹೀಗೆ ವಶಪಡಿಸಿಕೊಳ್ಳಲಾಗಿರುವ ಅಕ್ರಮ ಸಾಗಣೆಯ ಚಿನ್ನದ ಬೆಲೆ ಸುಮಾರು 2,000 ಕೋಟಿ ರೂ.ಗಳಿಗೂ ಅಧಿಕ.

ಗಡಿಯಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಿ, ದೇಶದೊಳಗೆ ವಿಮಾನಗಳಲ್ಲಿ ಬೇರೆ ಕಡೆಗೆ ರವಾನೆ ಮಾಡಲಾಗುತ್ತಿತ್ತು ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಚಕ್ಷಣ ದಳದ ಅಧಿಕಾರಿಗಳು ಇತ್ತೀಚೆಗೆ 10 ಕೆ.ಜಿ.ಚಿನ್ನ ಜಪ್ತಿ ಮಾಡಿದ್ದರು. ಇದರ ಜಾಡು ಹಿಡಿದು ತನಿಖೆ ನಡೆಸಿದಾಗ, ಚಿನ್ನ ಕಳ್ಳ ಸಾಗಣೆ ಮಾಡಿರುವ ಹಲವು ಸಂಗತಿ ಗೊತ್ತಾಗಿವೆ ಎಂದು ಕಂದಾಯ ವಿಚಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

► Follow us on –  Facebook / Twitter  / Google+

 

Sri Raghav

Admin