ಭಾವಿ ಪತಿಯನ್ನು ಕಲ್ಯಾಣಿ ಇಳಿಸಿ ಪ್ರೀತಿಸಿದವನೊಂದಿಗೆ ಭಾವಿ ಪತ್ನಿ ಪರಾರಿ

marriage

ಚನ್ನಪಟ್ಟಣ, ಸೆ.21- ನಿಶ್ಚಿತಾರ್ಥವಾಗಿ ಇನ್ನು 4 ದಿನ ಕಳೆದಿಲ್ಲ..ಭಾವಿ ಪತಿಯನ್ನು ಕಲ್ಯಾಣಿಗೆ ಇಳಿಸಿ ಪ್ರೀತಿಸಿದವನೊಂದಿಗೆ ಭಾವಿ ಪತ್ನಿ ಪೇರಿ ಕಿತ್ತಿರುವ ಘಟನೆ ತಾಲ್ಲೂಕಿನ ಕೆಂಗಲ್ ಕ್ಷೇತ್ರದಲ್ಲಿ ನಡೆದಿದೆ.ತಾಲ್ಲೂಕಿನ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ 5 ಕಿ.ಮೀ ದೂರದ ಅಂತರದಲ್ಲಿ ಬರುವ ಸ್ಫುರದ್ರೂಪಿಯನ್ನು ಪಕ್ಕದ ಗ್ರಾಮದ ಯುವಕನೊಂದಿಗೆ ಕೊಟ್ಟು ವಿವಾಹ ಮಾಡಿಕೊಡಲು ನಿಶ್ಚಯ ಮಾಡಿ ಎರಡು ಮನೆ ಕಡೆಯವರು ಸೇರಿ ಕಳೆದ ಸೆ.17ರಂದು ವಿಜೃಂಭಣೆಯಿಂದ ನಿಶ್ಚಿತಾರ್ಥವನ್ನು ಸಹ ಮಾಡಿಕೊಟ್ಟಿದ್ದರು.

ಕೆಂಗಲ್ ಕ್ಷೇತ್ರದಲ್ಲಿರುವ ಕಲ್ಯಾಣಿಯಲ್ಲಿ ಕೈ ಕಾಲು ಮುಖ ತೊಳೆದುಕೊಂಡರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಇಬ್ಬರು ಸಹ ಕ್ಷೇತ್ರಕ್ಕೆ ತೆರಳಿದ್ದರು. ಈ ವೇಳೆ ಕಲ್ಯಾಣಿಯಲ್ಲಿ ಕೈ ಕಾಲು ತೊಳೆದುಕೊಳ್ಳುವಂತೆ ಭಾವಿ ಪತ್ನಿ ಭಾವಿ ಪತಿಯನ್ನು ಕಲ್ಯಾಣಿಗೆ ಇಳಿಸಿದ್ದಾಳೆ.  ಭಾವಿ ಪತ್ನಿಯ ಮಾತನ್ನು ನಂಬಿದ ಅಮಾಯಕ ಯುವಕ ಕಲ್ಯಾಣಿಗೆ ಇಳಿದು ಕೆಂಗಲ್ ಹನುಮಂತರಾಯ ಎಂದು ನೆನೆದು ಕೈ ಕಾಲು ಮುಖ ತೊಳೆದುಕೊಳ್ಳುತ್ತಿದ್ದರೆ ಇತ್ತ ತನ್ನ ಪೂರ್ವಭಾವಿ ಯೋಜನೆಯಂತೆ ತನ್ನ ಜತೆ ಕಾಲೇಜಿನಲ್ಲಿ ಓದುತ್ತಿದ್ದ ಪ್ರಿಯಕರನನ್ನು ಕರೆಸಿಕೊಂಡು ಕ್ಷಣಾರ್ಧದಲ್ಲೇ ಕಣ್ಮರೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಪರಾರಿಯಾಗಿರುವ ಯುವತಿ ಎರಡು ವರ್ಷದ ಹಿಂದೆ ಕಾಲೇಜಿನಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಮದುವೆಗೂ ಸಿದ್ಧತೆ ನಡೆಸಿದ್ದರು.ಈ ವಿಷಯ ಪೋಷಕರಿಗೆ ತಿಳಿದು ಮದುವೆ ಮಾಡಲು ಟೊಯೋಟಾ ಕಂಪೆನಿ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿ ನಿಶ್ಚಿತಾರ್ಥವನ್ನು ಸಹ ಮುಗಿಸಿ ಬರುವ ತಿಂಗಳು ಮದುವೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು.ಒಲ್ಲದ ಮನಸ್ಸಿನಿಂದ ಪೋ ಷಕರು ನೋಡಿದ ಯುವಕನೊಂದಿಗೆ ವಿವಾಹವಾಗಲು ಒಪ್ಪಿಕೊಂಡಿದ್ದು, ಅನುಮಾನ ಬಾರದಂತೆ ಕಾಲೇಜು ಪ್ರಿಯಕರನ ಜತೆ ಪೇರಿ ಕೀಳಲು ಪೂರ್ವಭಾವಿ ಸಿದ್ಧತೆ ನಡೆಸಿ ಭಾವಿ ಪತಿಯನ್ನು ಕಲ್ಯಾಣಿಗೆ ಇಳಿಸಿ ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಾಳೆ.

 

► Follow us on –  Facebook / Twitter  / Google+

 

 

Sri Raghav

Admin