ಭಾವೈಕ್ಯತೆ ಬೆಸೆಯುವ ಭಾಷೆ ಹಿಂದಿ

8

ಗದಗ,ಅ.5- ರಾಷ್ಟ್ರೀಯ ಭಾಷೆ ಹಿಂದಿಯು ಸರಳ ಹಾಗೂ ಸುಮಧುರತೆ ಹೊಂದಿದ್ದು ರಾಷ್ಟ್ರೀಯ ಭಾವೈಕ್ಯತೆ ಬಾಂಧವ್ಯಗಳನ್ನು ಬೆಸೆಯುವ ಪ್ರಮುಖ ಭಾಷೆಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಕೆ. ಪವಾರ ಹೇಳಿದರು. ಅವರು ಸ್ಥಳೀಯ ವಿದ್ಯಾದಾನ ಸಮಿತಿಯ ಬಾಲಕಿಯರ ಪ.ಪೂ ಕಾಲೇಜಿನಲ್ಲಿ ಹಿಂದಿ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಹಿಂದಿ ಭಾಷೆಯು ಪ್ರಪಂಚದ ಅತ್ಯಂತ ಪ್ರಸ್ತುತತೆ ಹೊಂದಿರುವ ಭಾಷೆ ಯಾಗಿದ್ದು, 188ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ ಬೋಧಿಸಲ್ಪಡುವ ಭಾಷೆ ಯಾಗಿದೆ.

ರಾಷ್ಟ್ರಮಟ್ಟದಲ್ಲಿ ಪ್ರಮುಖ ಸರ್ವರ ಸಂಪರ್ಕ ಭಾಷೆಯಾಗಿದ್ದು, ಯಾವುದೇ ಜಾತಿ, ಮತ, ಪಂಥಗಳಿಗೆ ಸೀಮಿತವಾಗಿರದೇ ಏಕಾತ್ಮತೆಯ ಸೂತ್ರ ವನ್ನು ಬೆಸೆಯುವ ಭಾಷೆಯಾಗಿದೆ. ಕಬೀರ, ಸೂರದಾಸ, ತುಳಸಿದಾಸ, ಮಿರಾ ಬಾಯಿ, ಮಹಾದೇವಿ ವರ್ಮ, ಪ್ರೇಮಚಂದ್, ಜಯಶಂಕರ ಪ್ರಸಾದ ಮುಂತಾದ ಮಹಾನ್ ಕವಿಗಳು, ಸಾಹಿತಿಗಳಿಂದ ಶ್ರೀಮಂತವಾಗಿದ್ದು ಓದುಗರಿಗೆ ರಸಾನುಭೂತಿಯನ್ನು ನೀಡುವ ಸಾಹಿತ್ಯ ಸಾಗರವನ್ನು ಹೊಂದಿದೆ. ಇಂತಹ ಹಿಂದಿ ಸಾಹಿತ್ಯವನ್ನು ವಿದ್ಯಾರ್ಥಿಗಳು ಅಭ್ಯಸಿಸಿ ಜೀವನದಲ್ಲಿ ಯಶಸ್ವಿ ಹೊಂದ ಬೇಕೆಂದು ಹಾರೈಸಿದರು. ಸನ್ಮಾನ ಸ್ವೀಕರಿಸಿ ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ ತಾವು ಗದಗ-ಬೆಟಗೇರಿ ನಗರಸಭೈ ಉಪಾಧ್ಯಕ್ಷ ರಾಗಿ ಆಯ್ಕೆಯಾಗಿದ್ದು ಜವಾಬ್ದಾರಿಯನ್ನು ಹೆಚ್ಚಿಸಿದೆ. ನಗರದ ನೈರ್ಮಲೀಕರಣ ಮತ್ತು ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.

ದೇಶದ ಯಾವುದೇ ಭಾಗದಲ್ಲಿ ಸಂಚರಿಸಬೇಕಾದರೆ ಹಿಂದಿ ಭಾಷೆಯ ಜ್ಞಾನ ಅತ್ಯವಶ್ಯವಾಗಿದೆ. ಅದು ಪ್ರಮುಖ ಸಂಪರ್ಕ ಭಾಷೆಯಾಗಿದ್ದು, ಎಲ್ಲ ವಿದ್ಯಾರ್ಥಿಗಳು ಹಿಂದಿಯನ್ನು ಅಭ್ಯಸಿಸಿ ಆ ಭಾಷೆಯ ಸೊಗಡನ್ನು ಅರಿತು ಕೊಂಡು ಭಾವಿ ಜೀವನದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿ ದರು.ಸಮಾರಂಭದಲ್ಲಿ ಗದಗ-ಬೆಟಗೇರಿ ನಗರಸಭೈಗೆ ನೂತನವಾಗಿ ಉಪಾಧ್ಯಕ್ಷ ರಾಗಿ ಆಯ್ಕೆಯಾದ ಶ್ರೀನಿವಾಸ ಹುಯಿಲಗೋಳ ಅವರನ್ನು ಹಾಗೂ ಕ.ವಿ.ವಿ ಹಿಂದಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಡಾ. ಎಸ್.ಕೆ. ಪವಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭವು ವಿದ್ಯಾರ್ಥಿಗಳಾದ ರತ್ನಾ ಪೂಜಾರ ಹಾಗೂ ಜ್ಯೋತಿ ಪೂಜಾರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಶಾಂತ ಪಾಟೀಲ ಸ್ವಾಗತಿಸಿದರು. ಹಿಂದಿ ವಿಬಾಗದ ಮುಖ್ಯಸ್ಥರಾದ ಡಾ. ಬಿ.ಎಸ್. ರಾಠೋಡ ನಿರೂಪಿಸಿದರು.

ಡಾ. ಲಕ್ಷ್ಮೀದೇವಿ ಗವಾಯಿ ಹಿಂದಿ ಭಾವಗೀತೆ ಗಾಯನ ನಡೆಸಿಕೊಟ್ಟರು ವಿದ್ಯಾರ್ಥಿನಿಯರಾದ ರತ್ನಾ ಪೂಜಾರ, ನೀಲಗುಂದ ಹಿಂದಿ ಭಾಷೆಯ ಮಹತ್ವ ಕುರಿತು ಮಾತನಾಡಿ ಶಾಯರಿ ವಾಚಿಸಿದರು ಪ್ರೊ ರ. ಮುಕ್ತಾ ಉಡುಪಿ ವಂದಿಸಿದರು. ಸಮಾರಂಭದಲ್ಲಿ ಪ್ರಾ. ಎಸ್.ಸಿ. ಹೆದ್ದೂರಿ ಅಧ್ಯಕ್ಷತೆ ವಹಿಸಿದ್ದರು. ಉಪ ನ್ಯಾಸಕರಾದ ಬಿ.ಬಿ. ಮಿರ್ಜಿ ದತ್ತಪ್ರಸನ್ನ ಪಾಟೀಲ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿನಿಯರಿಂದ ಹಿಂದಿ ನೃತ್ಯ ಮನರಂಜನಾ ಕಾರ್ಯಕ್ರಮಗಳು ಜರುಗಿದವು.

 

► Follow us on –  Facebook / Twitter  / Google+

Sri Raghav

Admin