ಭಾಷೆ ಭಾವಾನಾತ್ಮಕ ಸಂಬಂಧಗಳನ್ನು ಬೆಸೆಯುವ ಕೊಂಡಿ

chikkamangaluru-6

ಚಿಕ್ಕಮಗಳೂರು, ಸೆ.17- ಭಾಷೆ ಭಾವಾನಾತ್ಮಕ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿದೆ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎನ್. ಎಸ್. ಶಿವಸ್ವಾಮಿ ಹೇಳಿದರು.ನಗರದ ಶ್ವೇತ ವಿದ್ಯಾಸಂಸ್ಥೆಯಲ್ಲಿ ನಡೆದ ಹಿಂದಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಮನುಷ್ಯರ ನಡುವಿನ ಅಂತರವನ್ನು ಕಡಿಮೆ ಮಾಡಿ ಭಾವಾನಾತ್ಮಕ ಸಂಬಂಧಗಳನ್ನು ಬೆಸೆಯಲು ಸಹಕಾರಿ ಎಂದರು.  ಹಿಂದಿ ಭಾಷೆ ಸಂಪರ್ಕ ಭಾಷೆಯಾಗಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಚಲಿತವಿರುವುದರಿಂದ ಆ ಭಾಷೆಯನ್ನು ಎಲ್ಲರೂ ಕಲಿಯುವುದು ಅಗತ್ಯ ಎಂದರು.

ಶಿಕ್ಷಕ ರಮೇಶ್ ಬೊಂಗಾಳೆ ಹಿಂದಿ ಭಾಷೆಯ ಬೆಳವಣಿಗೆ ಮತ್ತು ಅದರ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.  ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮಂಜುನಾಥ್ ರಾವ್ ಮಾತನಾಡಿ, ಈಗಾಗಲೇ ಆರಂಭಗೊಂಡಿರುವ ಹಿಂದಿ ಪಾಕ್ಷಿಕ ಕಾರ್ಯಕ್ರಮ ಜಿಲ್ಲೆಯಾದ್ಯಂತ 28 ರವರೆಗೆ ನಡೆಸಲಾಗುವುದು ಎಂದು ತಿಳಿಸಿದರು. ಉಪನ್ಯಾಸಕಿ ಮೇಘನ, ಚಂದ್ರಶೇಖರ್ , ಸೋಮಲಿಂಗ, ಅರುಣ್ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin