ಭಾಸ್ಕರ್ಶೆಟ್ಟಿ ಕೊಲೆ ಪ್ರಕರಣ : ಉಂಗುರದಲ್ಲಿದ್ದ ವಜ್ರ ನುಂಗಿ ಆತ್ಮಹತ್ಯೆಗೆ ಯತ್ನಸಿದ ನಿರಂಜನ್ ಭಟ್
ಉಡುಪಿ ಆ.09 : ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಸೂತ್ರದಾರ , ಆರೋಪಿ ನಿರಂಜನ ಭಟ್ (26) ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಕುರಿತು ವರದಿಯಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಭಟ್ ಕೈ ಬೆರಳಿದಲ್ಲಿದ್ದ ವಜ್ರ ದುಂಗುರವನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಆತನನ್ನು ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಹೇಳಲಾಗಿದೆ. ರವಿವಾರ ರಾತ್ರಿಯಿಂದಲೇ ನಿರಂಜನ ಪೊಲೀಸರ ವಶದಲ್ಲಿದ್ದಾನೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಯಶಸ್ಸುಸಾಧಿಸಿದ್ದಾರೆ. ನಿರಂಜನ ಸ್ವತಃ ಪೊಲೀಸರ ಎದುರು ಶರ ಣಾಗಿದ್ದೇ ಅಥವಾ ಪೊಲೀಸರು ಬಂಧಿಸಿದ್ದೇ ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಆದರೆ ಆತನನ್ನು ಕೇಂದ್ರೀಕರಿಸಿಕೊಂಡು ತನಿಖೆ ನಡೆಯುತ್ತಿದೆ. ನಂದಳಿಕೆಯಲ್ಲಿನ ಆತನ ಮನೆಗೂ ಕರೆದೊಯ್ಯ ಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಸಾಕಷ್ಟು ಮಾಹಿತಿಗಳನ್ನೂ ಆತನಿಂದ ಸಂಗ್ರಹಿಸಿದ್ದಾರೆ.
ಇಬ್ಬರ ಬಂಧನ, ಮೂವರು ವಶದಲ್ಲಿ ಜು. 28ರಂದು ನಾಪತ್ತೆಯಾಗಿದ್ದ ಭಾಸ್ಕರ ಶೆಟ್ಟಿ ಕೊಲೆ ನಡೆದಿರುವುದು ಬೆಳಕಿಗೆ ಬಂದದ್ದು ಆ. 6 ರಂದು. ಕೊಲೆ ಹೇಗೆ ನಡೆದಿದೆ ಎಂಬುದು ಆ. 7 ರಂದು ಗೊತ್ತಾಗಿತ್ತು. ಅನಂತರ ಇದಕ್ಕೆ ಸಂಬಂಧಿಸಿ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ನನ್ನು ಬಂಧಿಸಲಾಗಿತ್ತು. ಆ. 7ರಂದು ಸಂಜೆಯ ವೇಳೆಗೆ ನಿರಂಜನ್ನ ತಂದೆ ಶ್ರೀನಿವಾಸ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಇದಕ್ಕೂ ಮೊದಲು ನಿರಂಜನ್ಗೆ ನೆರವಾದ ಆರೋಪದಲ್ಲಿ ಆತನ ಕಾರು ಚಾಲಕನೂ ಆಗಿರುವ ಕೊಂಬು ವಾದಕನನ್ನೂ ವಶಕ್ಕೆ ತೆಗೆದುಕೊಂಡಿದ್ದರು. ಇಂದು ನಿರಂಜನ್ ಮತ್ತು ಚಾಲಕನನ್ನು ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ.