ಭೀಕರ ಶೀತಗಾಳಿಗೆ ಯುರೋಪಿನಾದ್ಯಂತ 25ಕ್ಕೂ ಹೆಚ್ಚು ಮಂದಿ ಬಲಿ

Spread the love

20-KIled

ವಾರ್ಸಾ (ಪೋಲೆಂಡ್), ಜ.9- ಯುರೋಪಿನಾದ್ಯಂತ ಬೀಸುತ್ತಿರುವ ಪ್ರಬಲ ಶೀತಗಾಳಿಯಿಂದಾಗಿ ಕಳೆದ ಎರಡು ದಿನಗಳಲ್ಲಿ 25ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಅನೇಕರು ಅಸ್ವಸ್ಥರಾಗಿದ್ದಾರೆ. ಇದೇ ಪ್ರತಿಕೂಲ ವಾತಾವರಣ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದ್ದು ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಅಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟವರಲ್ಲಿ ಹೆಚ್ಚಿನ ಮಂದಿ ಪೋಲೆಂಡ್‍ನವರು. ಅಲ್ಲಿನ ತಾಪಮಾನ ಮೈನಸ್ 14 ಡಿಗ್ರಿ ಸೆಲ್ಸಿಯಸ್‍ಗೆ ಇಳಿದಿದೆ. ತೀವ್ರ ಶೀತಮಾರುತದಲ್ಲಿ ಸತ್ತವರು ಮನೆಯಿಂದ ಹೊರಗಿರುವವರು ಮತ್ತು ವಲಸಿಗರು ಎಂದು ಅಕಾರಿಗಳು ಹೇಳಿದ್ದಾರೆ. ಇಟಲಿಯಲ್ಲಿ 48 ಗಂಟೆಗಳ ಅವಯಲ್ಲಿ ಚಳಿಗಾಳಿಗೆ ಏಳು ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಮಧ್ಯ ಮತ್ತು ನೈರುತ್ಯ ಇಟಲಿಯಲ್ಲಿ ಭಾರೀ ಹಿಮಪಾತವಾಗಿದ್ದು, ಸಾವು-ನೋವಿನ ವರದಿಗಳಿವೆ. ಅನೇಕ ವಿಮಾನ ನಿಲ್ದಾಣಗಳು ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಈ ಮಧ್ಯೆ, ರಷ್ಯಾದಲ್ಲಿ 140 ವರ್ಷಗಳಲ್ಲೇ ಅತ್ಯಂತ ಶೀತಲ ಆರ್ಥೊಡಾಕ್ಸ್ ಕ್ರಿಸ್ಮಸ್ ಆಚರಿಸಲಾಯಿತು. ರಾಜಧಾನಿ ಮಾಸ್ಕೋ ಮತ್ತು ಸೆಂಟ್ ಪೀಟರ್ಸ್‍ಬರ್ಗ್‍ನಲ್ಲಿ ಕ್ರಮವಾಗಿ ಮೈನಸ್ 30 ಡಿಗ್ರಿ ಮತ್ತು ಮೈನಸ್ 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಸೆಂಟ್ ಪೀಟರ್ಸ್‍ಬರ್ಗ್‍ನಲ್ಲಿ ಒಬ್ಬ ವ್ಯಕ್ತಿಯ ಶವ ಪತ್ತೆಯಾಗಿದೆ.  ಟರ್ಕಿಯ ಇಸ್ತಾನ್‍ಬುಲ್ ದಟ್ಟ ಮಂಜು ಆವರಿಸಿದ್ದು, ಶೀತ ಮಾರುತಕ್ಕೆ ಆಫ್ಘನ್ ನಿರಾಶ್ರಿತನೊಬ್ಬ ಬಲಿಯಾಗಿದ್ದಾನೆ, ಜನರು ಹಿಮಗಾಳಿಗೆ ಮೈಯೊಡ್ಡದಂತೆ ಸೂಚನೆ ನೀಡಲಾಗಿದೆ.  ಗ್ರೀಸ್‍ನಲ್ಲೂ ಹಿಮಪಾತದ ಆರ್ಭಟ ತೀವ್ರವಾಗಿದೆ ಅಲ್ಲಿ ಆಶ್ರಯ ಪಡೆದಿರುವ 60,000ಕ್ಕೂ ಹೆಚ್ಚು ಸಿರಿಯಾ ನಿರಾಶ್ರಿತರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.

ಬಲ್ಗೇರಿಯಾದ ಗುಡ್ಡಗಾಡು ಅರಣ್ಯವೊಂದಲ್ಲಿ ಇರಾಕ್ ನಿರಾಶ್ರಿತರಿಬ್ಬರು ಮೃತಪಟ್ಟಿದ್ದಾರೆ.  ಏಷ್ಯಾದ ಚೀನಾ, ಜಪಾನ್, ತೈವಾನ್, ಭಾರತದ ಕೆಲವು ಭಾಗಗಳಲ್ಲೂ ಹಿಮವರ್ಷ ಧಾರೆಯಿಂದ ಸಾಮಾನ್ಯ ಜನಜೀವನಕ್ಕೆ ದಕ್ಕೆಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin