ಭೂಕಂಟಕ ಕ್ಷುದ್ರಗ್ರಹಗಳಿಗಾಗಿ ನಾಸಾ ತೀವ್ರ ಶೋಧ

Nasa--01

ವಾಷಿಂಗ್ಟನ್, ಫೆ.11-ಭೂಮಿಯ ಸಮೀಪದಲ್ಲಿರುವ ಕಂಟಕಕಾರಿ ಕ್ಷುದ್ರಗ್ರಹಗಳಿಗಾಗಿ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಗಗನ ನೌಕೆಯೊಂದು ಅಂತರಿಕ್ಷದಲ್ಲಿ ತೀವ್ರ ಶೋಧ ನಡೆಸುತ್ತಿದೆ. ಭೂಮಿಯಿಂದ ವೀಕ್ಷಿಸಲು ಕಷ್ಟವಾಗುವ ಬಾಹ್ಯಾಕಾಶದಲ್ಲಿ ಸ್ಥಳಗಳಲ್ಲಿ ಕ್ಷುದ್ರಗ್ರಹಗಳು ಸಂಚರಿಸುತ್ತಿವೆ ಎಂಬ ಸಂಶಯದ ಮೇಲೆ ಈ ಕಾರ್ಯಾಚರಣೆ ನಡೆಯುತ್ತಿದೆ.
ಓಸಿರಿಸ್ ರೆಕ್ಸ್ ಎಂಬ ಗಗನನೌಕೆಯು ಬೆನ್ನು ಎಂಬ ಹೆಸರಿನ ಅಪಾಯಕಾರಿ ಕ್ಷುದ್ರಗ್ರಹದ ಶೋಧಕ್ಕಾಗಿ ಎರಡು ವರ್ಷಗಳ ನಿರಂತರ ಯೋಜನೆಯೊಂದಿಗೆ ಕಾರ್ಯೋನ್ಮುಖವಾಗಿದೆ. ಇಂಥ ಕ್ಷುದ್ರಗ್ರಹಗಳ ಅಸ್ತಿತ್ವದ ಬಗ್ಗೆ ಸಾಕ್ಷ್ಯಾಧಾರ ಒದಗಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಪತ್ತೆಯಾದ ಬಳಿಕ ಫೋಟೊಗಳನ್ನು ತೆಗೆದು ಭೂಮಿಗೆ ರವಾನಿಸಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin