ಭೋಜಾ ಇದ್ರೂ ನಿವೇಶನ ಖರೀದಿ..! ಕರ್ತವ್ಯ ಲೋಪವೆಸಗಿದ ನೋಂದಣಾಧಿಕಾರಿ

Spread the love

14

ಬಾದಾಮಿ,ಮಾ.17- ಡಿಸಿಸಿ ಬ್ಯಾಂಕಿನವರು ಖರೀದಿಸಿದ ನಿವೇಶನದ ಮಾಲಿಕ ವಿಷ್ಣು ಕೃಷ್ಣಪ್ಪ ಬೋನಗೇರ ಎಂಬುವವರು ಪಟ್ಟಣದ ಕಿತ್ತೂರ ಚೆನ್ನಮ್ಮ ಮಹಿಳಾ ಬ್ಯಾಂಕಿನಲ್ಲಿ 5 ಲಕ್ಷ ಸಾಲ ಮಾಡಿ ಬಾಕಿ ಮರುಪಾವತಿ ಮಾಡದಿದ್ದರಿಂದ ನಿವೇಶನದ ಮೇಲೆ 5 ಲಕ್ಷ ಬೋಜ ಇದೆ. ಹಾಗಾಗಿ ಯಾವುದೇ ಖರೀದಿ ವ್ಯವಹಾರಗಳನ್ನು ಮಾಡಲು ಬರುವುದಿಲ್ಲ. ಆದರೂ ನೋಂದಣಾಧಿಕಾರಿಗಳು ಕಾನೂನು ಬಾಹಿರವಾಗಿ ನೋಂದಣಿ ಮಾಡಿದ್ದಾರೆ. ಡಿಸಿಸಿ ಬ್ಯಾಂಕಿನವರು ತರಾತುರಿಯಲ್ಲಿ ಖರೀದಿಸಿದ್ದು ನೋಡಿದರೆ ಭ್ರಷ್ಠಚಾರ ನಡೆದಿರುವುದು ಸ್ಪಷ್ಟ ಎಂದು ಮಾಹಿತಿ ಹಕ್ಕು ಅಧ್ಯಕ್ಷ ಶಿವು ಕಿರಗಿ ಆರೋಪಿಸಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಬಾಗಲಕೋಟ ಡಿಸಿಸಿ ಬ್ಯಾಂಕ ತಾಲೂಕಿನ ಬೇಲೂರಿನಲ್ಲಿ ಅಕ್ಟೋಬರ ತಿಂಗಳಲ್ಲಿ ಪ್ರಾರಂಭವಾಗಿದ್ದು ಇದಕ್ಕೆ ಸ್ವಂತ ಕಟ್ಟಡ ಕಟ್ಟಲು ನಿವೇಶನ ಖರೀದಿ ಮಾಡಿದ್ದಾರೆ. ಆದರೆ ಈ ಖರೀದಿಯಲ್ಲಿ ಅವ್ಯವಹಾರವಾಗಿದ್ದು ಇಂದು ತಮ್ಮ ಸ್ವಹಿತಾಸಕ್ತಿಗೆ ರೈತರ ಬೆನ್ನಿಗೆ ಚೂರಿಹಾಕುವ ಹುನ್ನಾರ ಮಾಡುತ್ತ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಬೇಲೂರಿನಲ್ಲಿ ಬ್ಯಾಂಕಿಗೆ 5ರಿಂದ 6 ಲಕ್ಷದಲ್ಲಿ ಊರಿಗೆ ಸಮೀಪವಿರುವ ನಿವೇಶನ ಕೊಡಿಸುತ್ತೇವೆ. ಊರಿನಿಂದ ದೂರ ಇರುವ ನಿವೇಶನಕ್ಕೆ 43 ಲಕ್ಷದಷ್ಟು ಹಣವನ್ನು ನೀಡಿ ಜನರ ಹಣವನ್ನು ನುಂಗಿಹಾಕಲು ಮಾಡಿರುವ ಈ ಷಡ್ಯಂತ್ರವನ್ನು ಬಯಲು ಮಾಡಲು ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರುರೈತ ಮುಖಂಡ ಬಣ್ಣಪ್ಪ ಪಡಿಯಪ್ಪನವರ ಮಾತನಾಡಿ ರೈತರ ಸಹಕಾರಿ ಬ್ಯಾಂಕಿನಲ್ಲಿ ಲಕ್ಷಾಂತರ ರೂಗಳನ್ನು ದುರುಪಯೋಗ ಮಾಡಿಕೊಂಡು ರೈತರ ಹಾಗೂ ಠೇವಣಿದಾರರ ಹಣವನ್ನು ದುರುಪಯೋಗ ಮಾಡಿದ್ದಾರೆ. ಈ ಬಡ ರೈತರ ಹಾಗೂ ಠೇವಣಿದಾರರ ಹಣವು ದುರುಪಯೋಗವಾಗದಂತೆ ಖರೀದಿ ವ್ಯವಹಾರವನ್ನು ರದ್ದು ಪಡಿಸಬೇಕು. ಮಾರುಕಟ್ಟೆಯ ದರದ ಪ್ರಕಾರ ನಿವೇಶನಗಳನ್ನು ಶಾಖೆಯ ಕಟ್ಟಡಕ್ಕೆ ಖರೀದಿಸಬೇಕು. ತಪ್ಪಿತಸ್ಥರ ವಿರುದ್ದ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರುಈ ಸಂದರ್ಭದಲ್ಲಿ ಚನ್ನಯ್ಯ ಹಂಪಿಹೊಳಿಮಠ, ನಿಜಲಿಂಗಪ್ಪ ಹೊಸಗೌಡ್ರ, ಮಲ್ಲಣ್ಣ ಸಂಕದಾಳ, ಅಪ್ಪಣ್ಣ ಲೋಕಾಪೂರ, ರಾಜು ಪಾಟೀಲ,ಪ್ರಕಾಶ ವಾಲಿ, ಈರಣ್ಣ ಪಾಟೀಲ, ಚಿದಾನಂದ ಮೆನಸಗಿ, ಜಗದೀಶ ತೋಟಗೇರ, ಸಿ.ಎಸ್.ಗೌಡ್ರ, ಹನಮಂತ ಬೀರಕಬ್ಬಿ, ಬಸವರಾಜ ಕಂಬಿ, ಮೌನೇಶ್  ಮೆರಡಿತೋಟದ, ಮುತ್ತಣ್ಣ ಪೂಜರ, ಉಮೇಶ ಕುಂಬಾರ, ಇಷ್ಟಲಿಂಗ ಹಂಪಿಹೊಳಿ, ಎಮ್.ಬಿ.ಕೆಲೂರ, ರಂಗಪ್ಪ ನಾಗನೂರ ಹಾಗೂ ಚೋಳಚಗುಡ್ಡ ಬೇಲೂರ ಜಲಿಹಾಳ ಸೇರಿದಂತೆ ಅನೇಕ ಗ್ರಾಮಸ್ಥರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin