ಭೋಪಾಲ್-ಉಜ್ಜೈನ್ ರೈಲಿನಲ್ಲಿ ಸ್ಫೋಟ ಪ್ರಕರಣ : ಎನ್‍ಐಎ ತನಿಖೆ ಚುರುಕು

Spread the love

Train-Blast--01

ನವದೆಹಲಿ,ಮಾ.8-ಮಧ್ಯಪ್ರದೇಶದ ಭೋಪಾಲ್-ಉಜ್ಜೈನ್ ರೈಲಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತನಿಖೆಯನ್ನು ಚುರುಕುಗೊಳಿಸಿದೆ.   ಈಗಾಗಲೇ ಭೋಪಾಲ್‍ಗೆ ಆಗಮಿಸಿರುವ ಸಂಸ್ಥೆಯ ತನಿಖಾಧಿಕಾರಿಗಳು ಎಲ್ಲಾ ಆಯಾಮಗಳಿಂದಲೂ ತನಿಖೆ ಮುಂದುವರೆಸಿದ್ದಾರೆ. ಶಹಾಜಾಪುರ್ ಜಿಲ್ಲೆಯ ಜಬ್ರಿ ರೈಲ್ವೆ ನಿಲ್ದಾಣದ ಬಳಿ ನಡೆದ ಸ್ಫೋಟದಲ್ಲಿ 12 ಮಂದಿ ಗಾಯಗೊಂಡಿದ್ದರು. ಈ ಕೃತ್ಯದಲ್ಲಿ ಐಎಸ್ ಉಗ್ರರು ಶಾಮೀಲಾಗಿರುವುದು ದೃಢಪಟ್ಟಿದ್ದು , ತನಿಖೆ ಪ್ರಾಮುಖ್ಯತೆ ಪಡೆದುಕೊಂಡಿದೆ
ಈ ಸಂಬಂಧ ಈಗಾಗಲೇ ಐಎಸ್ ಉಗ್ರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಲಕ್ನೋದಲ್ಲಿ ಭಯೋತ್ಪಾದನಾ ನಿಗ್ರಹ ದಳದ ಕಮಾಂಡೋಗಳ ಗುಂಡಿಗೆ ಬಲಿಯಾದ ಸೈಫುಲ್ಲಾನ ಬಳಿ ಭಾರತದ ಪ್ರಮುಖ ನಗರಗಳ ರೈಲು ಮಾರ್ಗಗಳು ಮತ್ತು ವೇಳಾಪಟ್ಟಿಯ ಮಾಹಿತಿಗಳು ಪತ್ತೆಯಾಗಿದ್ದು , ಅದರ ಆಧಾರದ ಮೇಲೆ ಎನ್‍ಐಎ ತನಿಖೆ ಮುಂದುವರೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin