ಮಂಗಳಗ್ರಹದಲ್ಲಿ ಅಪಹೃತ ಮಕ್ಕಳನ್ನು ಲೈಂಗಿಕ ಶೋಷಣೆಗೆ ಬಳಸಿಕೊಂಡು ಕೊಲ್ಲಲಾಗುತ್ತಿದೆ..!
ನ್ಯೂಯಾರ್ಕ್, ಜು.2-ಮಂಗಳಗ್ರಹದಲ್ಲಿ ಅಪಹೃತ ಮಕ್ಕಳಿಂದಲೇ ತುಂಬಿರುವ ಒಂದು ಕಾಲೋನಿ ಇದೆ. ಅಲ್ಲಿ ಶಿಶುಕಾಮಿಗಳು ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿ ನಂತರ ಕೊಲ್ಲುತ್ತಾರೆ. ಬಳಿಕ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಲಾಗುತ್ತದೆ. ಈ ಮಕ್ಕಳನ್ನು 20 ವರ್ಷದ ಬಾಹ್ಯಾಕಾಶ ಯಾತ್ರೆಗೆ ಕಳುಹಿಸಲಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ-ಇದು ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಕರ್ತ ಡೇವಿಡ್ ಸ್ಟೀಲ್ ಅವರ ಅಭಿಪ್ರಾಯ. ಅಮೆರಿಕ ನ್ಯಾಷನಲ್ ಬ್ರಾಡ್ಕಾಸ್ಟಿಂಗ್ ಕಂಪನಿ (ಎನ್ಬಿಸಿ) ನಡೆಸಿದ ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತ ಮಕ್ಕಳು ಕುರಿತು ಬಾನುಲಿ ಸಂವಾದದಲ್ಲಿ ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗುವ ಈ ಹೇಳಿಕೆಯನ್ನು ಡೇವಿಡ್ ನೀಡಿದ್ದಾರೆ.
ಖ್ಯಾತ ನಿರೂಪಕ ಅಲೆಕ್ಸ್ ಜೋನ್ಸ್ ಕೇಳಿದ ಪ್ರಶ್ನೆಗೆ ಕೆಂಪುಗ್ರಹದಲ್ಲಿ ಅಪಹೃತ ಮಕ್ಕಳನ್ನು ಅಡಗಿಸಿ ಇಡಲಾಗಿದೆ. ಒಮ್ಮೆ ಈ ಮಕ್ಕಳು ಮಂಗಳಗ್ರಹಕ್ಕೆ ರವಾನಿಸಲ್ಪಟ್ಟರೆ, ಅಲ್ಲಿ ಅವರು ಗುಲಾಮರಂತೆ ಅಥವಾ ಜೀತದಾಳುಗಳಂತೆ ಇರಬೇಕಾಗುತ್ತದೆ. ಅದರ ಹೊರತು ಅವರಿಗೆ ಅಲ್ಲಿ ಬದುಕಲು ಅನ್ಯಮಾರ್ಗವಿಲ್ಲ. ಅಲ್ಲಿ ಶಿಶುಕಾಮಿಗಳು ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿ ನಂತರ ಕೊಲ್ಲುತ್ತಾರೆ. ಬಳಿಕ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಲಾಗುತ್ತದೆ ಎಂಬ ಆತಂಕಕಾರಿ ಸಂಗತಿಯನ್ನೂ ಸಹ ಅವರು ಪ್ರಸ್ತಾಪಿಸಿದ್ದಾರೆ.
ಡೇವಿಡ್ರ ಈ ಹೇಳಿಕೆಯನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮಂಗಳ ಯೋಜನೆಯ ವಕ್ತಾರ ಗಯ್ ವೆಬ್ಸ್ಟರ್ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಮಂಗಳ ಗ್ರಹದಲ್ಲಿ ಮಾನವರಿಲ್ಲ. ಅಲ್ಲಿ ಸಕ್ರಿಯ ಸಂಚಾರಿಗಳು (ಆಕಾಶಕಾಯ/ಅನ್ಯ ಜೀವಿಗಳು) ಇದ್ದಾರೆ. ಕೆಂಪುಗ್ರಹದಲ್ಲಿ ಮನುಷ್ಯರು ಇರಲು ಸಾಧ್ಯವೇ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನಿರೂಪಕ ಜೋನ್ಸ್ ನಡೆಸಿಕೊಂಡುವ ಈ ರೇಡಿಯೋ ಕಾರ್ಯಕ್ರಮ ಜನಪ್ರಿಯವಾಗಿದ್ದು, 118 ಬಾನುಲಿ ನಿಲಯಗಳಿಂದ ಪ್ರಸಾರವಾಗುತ್ತಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS