ಮಂಗಳೂರಲ್ಲಿ ಕುಖ್ಯಾತ ರೌಡಿ ಕಾಲಿಯಾ ರಫಿಕ್ ನ ಬರ್ಬರ ಹತ್ಯೆ

Spread the love

Mangaluru-Murder-01

ಮಂಗಳೂರು, ಫೆ.15-ಕುಖ್ಯಾತ ರೌಡಿಶೀಟರ್ ಕಾಲಿಯಾ ರಫಿಕ್ (35)ನನ್ನು ಗುಂಡಿಟ್ಟು, ತಲ್ವಾರ್‍ನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.  ನಾಲ್ವರು ಸಂಬಂಧಿಕರ ಜತೆ ಕಾರಿನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ ಕೋಟೆಕಾರ್ ಪೆಟ್ರೋಲ್ ಬಂಕ್ ಬಳಿ ಮತ್ತೊಬ್ಬ ರೌಡಿ ಶೀಟರ್ ನೂರ್ ಅಲಿ ಅಡ್ಡಗಟ್ಟಿದ್ದಾನೆ.  ಇದಕ್ಕೂ ಮುನ್ನ ಲಾರಿಯೊಂದು ಕಾಲಿಯಾನ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಉಪ್ಪಳದ ರೌಡಿ ನೂರ್ ಅಲಿ ಮತ್ತವನ ಸಹಚರರು ಏಕಾಏಕಿ ದಾಳಿಗೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳಲು ಕಾಲಿಯಾ ಓಡಿದನಾದರೂ ರೌಡಿ ನೂರ್ ಅಲಿ ಆತನ ಮೇಲೆ ಗುಂಡು ಹಾರಿಸಿ ನಂತರ ತಲ್ವಾರ್‍ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

ದಾಳಿ ವೇಳೆ ಕಾಲಿಯಾನ ಸಂಬಂಧಿ ಜಾಹಿದ್‍ನಿಗೂ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಕೊಲೆಯಾದ ರೌಡಿ ಕಾಲಿಯಾ ರಫೀಕ್ ವಿರುದ್ಧ ಕರ್ನಾಟಕ, ಕೇರಳ ರಾಜ್ಯಗಳಲ್ಲಿ 45ಕ್ಕೂ ಹೆಚ್ಚು ಕೊಲೆ, ಕೊಲೆಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin