ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

Spread the love

Congress-Manifesto

ಬೆಂಗಳೂರು, ಏ.27-ಒಂದು ಕೋಟಿ ಉದ್ಯೋಗ ಸೃಷ್ಠಿ, ಕರ್ನಾಟಕ ಅಗ್ರಿಕಲ್ಚರಲ್ ಕಾರಿಡಾರ್ ನಿರ್ಮಾಣ ಸೇರಿದಂತೆ ಹಲವಾರು ಭರವಸೆಗಳುಳ್ಳ ಚುನಾವಣಾ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮಂಗಳೂರಿನಲ್ಲಿಂದು ಬಿಡುಗಡೆ ಮಾಡಿದರು. ಮಂಗಳೂರಿನ ಟಿಎಂಎಪೈ ಸಭಾಂಗಣದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್‍ಗಾಂಧಿ ಇದು ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಣಾಳಿಕೆಯಾಗಿದೆ. ಆದರೆ ಬಿಜೆಪಿಯವರದು ಮೂರ್ನಾಲ್ಕು ಜನ ಉದ್ಯಮಿಗಳು, ಆರ್‍ಎಸ್‍ಎಸ್ ಮತ್ತು ರೆಡ್ಡಿ ಬ್ರದರ್ಸ್ ಅವರ ಬೇಡಿಕೆಗಳಿಗೆ ಒತ್ತು ಕೊಡುವ ಪ್ರಣಾಳಿಕೆಯಾಗಿದೆ ಎಂದು ಟೀಕಿಸಿದರು.

2025ರೊಳಗೆ ನವ ಕರ್ನಾಟಕ ನಿರ್ಮಿಸುವ ಗುರಿಯನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸುವುದು, ಸಂಪರ್ಕ ರಸ್ತೆಗಳನ್ನು ಸುಧಾರಿಸುವುದು, 5 ವರ್ಷದಲ್ಲಿ 10 ಲಕ್ಷ ಮನೆ ನಿರ್ಮಾಣ, ಎಲ್ಲರಿಗೂ ಮನೆ ಒದಗಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.  ಎರಡು ಹಂತದಲ್ಲಿ ಪ್ರಣಾಳಿಕೆ ತಯಾರಿಸಲಾಗಿದ್ದು, ರಾಜ್ಯಮಟ್ಟಕ್ಕೆ ಒಂದು ಪ್ರಣಾಳಿಕೆ ಸಿದ್ಧಪಡಿಸಿದರೆ, ಮಂಗಳೂರು, ಬೆಂಗಳೂರು, ಮೈಸೂರು ವಿಭಾಗಗಳಿಗೆ ಪ್ರತ್ಯೇಕವಾಗಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ.

Facebook Comments

Sri Raghav

Admin